ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಪುಣೆಯಲ್ಲಿ ಉದ್ಯಮಿಯಾಗಿದ್ದ ಹಣಕೋಣ ಮೂಲದ ವ್ಯಕ್ತಿಯನ್ನ ಕೊಲೆ ಮಾಡಿದ ಮೂವರು ಸೂಪಾರಿ ಹಂತಕನ್ನ ಬಂಧಿಸಲಾಗಿದೆ ಅಂತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಕಾರವಾರ ತಾಲೂಕಿನ ಹಣಕೋಣದಲ್ಲಿ ಮುಂಜಾನೆ 5ಗಂಟೆ ಸುಮಾರಿಗೆ ಊರಿಗೆ ಬಂದು ವಾಪಸ್ ಪುಣೆಗೆ ಹೋಗಲು ಸಿದ್ದತೆಯಲ್ಲಿದ್ದ ಉದ್ಯಮಿ ವಿನಾಯಕ ನಾಯ್ಕ(ರಾಜು) ಎಂಬಾತನನ್ನ ಮಾರಕಾಸ್ತ್ರದಿಂದ ಕೊಚ್ಚಿಕೊಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದರು..ಕೊಲೆಗಾರು ಬಂದಿದ್ದ ಕಾರಿನ ಸುಳಿವಿನ ಮೇಲೆ ತನಿಖೆ ಕೈಗೊಂಡ ಪೊಲೀಸರು ಬಂಧಿಸಿದ್ದಾರೆ.ಹಂತಕರು ಕೃತ್ಯ ಎಸೆಗೆಗಿದ ಬಳಿಕ ಯಾವುದೇ ಸುಳಿವು ನೀಡದೆ ಪರಾರಿಯಾಗಿದ್ದರು. ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದ ಎಸ್ಪಿ ಎಂ. ನಾರಾಯಣ ಅವರು 03 ತಂಡಗಳ ರಚಿಸಿ ಕಾರ್ಯಚರಣೆಗೆ ಇಳಿದಿದ್ದರು..

ಹತ್ಯೆಗೆ ಬಳಸಲಾಗಿದ್ದ ಕಾರು ಯಾರಿಗೆ ಸೇರಿದ್ದು, ಎನ್ನುವ ಬಗ್ಗೆ ಪೊಲೀಸರು ತನಿಖೆಗೆ ಇಳಿದ ವೇಳೆ ಗೋವಾದಲ್ಲಿ ಉದ್ಯಮಿ ಆಗಿದ್ದ ಗುರುಪ್ರಸಾದ್ ಠಾಣೆ ಎಂಬಾತ ವೈಯಕ್ತಿಕ ಕಾರಣಕ್ಕೆ ಪುಣೆಯಲ್ಲಿ ಉದ್ಯಮಿಯಾಗಿದ್ದ ವಿನಾಯಕ ನಾಯ್ಕ ಎಂಬಾತನ ಹತ್ಯೆಗಾಗಿ ತನ್ನ ಪರಿಚಯಸ್ಥರಿಂದ ಈ‌ ಕಾರನ್ನ ಪಡೆದು ಸೂಪಾರಿ ಹಂತಕರಿಗೆ ನೀಡಿದ್ದ ಎನ್ನುವ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ತನಿಖೆಯನ್ನ ಇಷ್ಟು ಚುರುಕುಗೊಳಿಸಿ ಮೂವರು ಸೂಫಾರಿ ಹಂತಕರನ್ನ ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ.

ಬಿಹಾರ ರಾಜ್ಯದ ಅಜ್ವಲ ಜಾಬೀರ (24),ಮಾಸೂಮ್ ಮಂಜೂರ್ (23) ಎಂಬಾತನನ್ನ ದೆಹಲಿಯಲ್ಲಿ ಬಂಧಿಸಲಾಗಿದೆ.‌ಇನ್ನೋರ್ವ ಆರೋಪಿಯಾಗಿದ್ದ ಜ್ಯೋತಿನಾಥ ಕೀನಾರಾಮನಾಥ ( 31) ಈತನ್ನ ಗೋವಾ ದ ಮಡಗಾಂವದಲ್ಲಿ ಇಂದು ಬಂಧಿಸಲಾಗಿದೆ. ಪೊಲೀಸ್ ತನಿಖೆ ಸಂದರ್ಭದಲ್ಲಿ ವೈಯಕ್ತಿಕ ದ್ವೇ಼ಷದ‌ ಹಿನ್ನಲೆಯಲ್ಲಿ ಕೃತ್ಯ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಗಮನಿಸಿ