ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಜಾತಿ ನಿಂದನೆ ಮಾಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಇಬ್ಬರು ವ್ಯಕ್ತಿಗಳ ಮೇಲೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ ತಾಲೂಕಿನ ಹಿರೇಗುತ್ತಿಯ ರಶ್ಮಿ ಮಂಜುನಾಥ ನಾಯಕ ಮತ್ತು ಸುಪ್ರೀತ್ ರಾಜು ನಾಯಕ ಮೇಲೆ ಪ್ರಕರಣ ದಾಖಲಾಗಿದೆ. ಹಿರೇಗುತ್ತಿ ಸಮೀಪದ ಎಣ್ಣೆಮಡಿಯ ಮಂಜಮ್ಮ ಲಿಂಗಪ್ಪ ಹಳ್ಳೇರ ತನ್ನ ಮಗನಾದ ವಿನಯ ಈತನಿಗೆ ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುವ ಬಗ್ಗೆ, ಸಾಲ
ಮಾಡಲು ಯೋಚನೆಯಲ್ಲಿದ್ದಾಗ ಆಪಾದಿತಳಾದ ಹಿರೇಗುತ್ತಿ ರಶ್ಮಿ ಮಂಜುನಾಥ ನಾಯಕ ಸಹಾಯ ಮಾಡುವುದಾಗಿ ಹೇಳಿ 2023
ನೇ ಸಾಲಿನಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಗೋಕರ್ಣದಲ್ಲಿ 50 ಸಾವಿರ ರೂ. ಸಾಲ ಕೊಟ್ಟಿದ್ದರು.

ಆಪಾದಿತರಾದ ರಶ್ಮಿ ನಾಯಕ ಮತ್ತು ಅವಳ ಪತಿ ಸುಪ್ರೀತ್ ಇವರು ಅಂಗಡಿ ಮಾಡಲು ಕಟ್ಟಡ ಹುಡುಕಿ ಮಾತುಕತೆ ಮಾಡಿದ್ದು, ಈ ಹಣವನ್ನು ಬಾಡಿಗೆ ನೀಡಿವವರಿಗೆ ಮುಂಗಡ ನೀಡಬೇಕಾಗುತ್ತದೆ ಅಂತ ಹೇಳಿ 11-08-2023 ರಂದು 32 ಸಾವಿರ ರೂ. 25-03-2024 ರಂದು 45 ಸಾವಿರ ರೂ. ಹಣವನ್ನು ಇಂಡಸ್‌ ಇಂಡ್ ಬ್ಯಾಂಕಿನಲ್ಲಿ, ಸಾಲ ಮಾಡಿ ಹಣವನ್ನು ಕ್ಯಾಸ್ ಮಾಡಿಕೊಂಡಹ ತಮ್ಮ ಬಳಿ ತೆಗೆದುಕೊಂಡಿದ್ದು, ನಂತರದ ದಿನಗಳಲ್ಲಿ ಮಗನಿಗಾಗಲಿ ಬಟ್ಟೆ ಅಂಗಡಿಯನ್ನು ಮಾಡಿ ಕೊಡದೇ, ಕಟ್ಟಡವನ್ನು ಮತ್ತು ವಸ್ತುಗಳನ್ನು ತೋರಿಸದೇ ಇದ್ದಾಗ ಸಂಶಯ ಬಂದು ಇವರನ್ನು ಭೇಟಿಯಾಗಿ ಹಣವನ್ನು ವಾಪಸ್ಸು ನೀಡುವ ಕುರಿತು ಕೇಳಿದಾಗ ಹಾರಿಕೆ ಉತ್ತರ ನೀಡುತ್ತಾ ಬಂದಿದ್ದಾರೆ.

ಹಣದ ವಿಷಯವಾಗಿ ಸೇಫ್ ಸ್ಕ್ಯಾರ್ ಸೌಹಾರ್ದ ಸಹಕಾರಿ ಸಂಘ ಮತ್ತು ಇಂಡಸ್ ಇಂಡ ಬ್ಯಾಂಕಿನವರು ಸಾಲ ವಸೂಲಾತಿಗಾಗಿ ದೂರುದಾರರ ಮನೆಗೆ ಬಂದಾಗ ಆಪಾದಿತರು ತನಗೆ ಮೋಸ ಮಾಡಿದ ಬಗ್ಗೆ ಗೊತ್ತಾಗಿ ಹಿರೇಗುತ್ತಿ ಗ್ರಾಮದ ಬೋಳಕೇರಿಯಲ್ಲಿರುವ ಶ್ರ ಹೀರೆ ಹೊಸಬ ಸಾರ್ವಜನಿಕ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಆಪಾದಿತರು ಕಂಡಿದ್ದು, ಅವರ ಬಳಿ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಹಳ್ಳೇರ ಜಾತಿಗೆ ಸೇರಿದವಳು ನಿಮ್ಮನ್ನು ಮುಟ್ಟಿಸಿಕೊಳ್ಳಬಾರದು. ನೀವು ದೂರ ನಿಂತು ಮಾತನಾಡು ಶುದ್ರರಾದ ನಿಮಗೆ ನಮ್ಮ ಎದುರು ನಿಂತು ಮಾತನಾಡುವನ್ನು, ಧೈರ್ಯ ಎಲ್ಲಿಂದ ಬಂತು ನೀವು ಇಲಿಗೆ ಬಂದಿರುವುದಕ್ಕೆ ದೇವಸ್ಮಾನವನ್ನು ಶುಚಿಗೊಳಿಸಬೇಕು ಎಂದು ಪರಿಶಿಷ್ಠ ಜಾತಿಯವಳೆಂದು ಜಾತಿಯ ಹೆಸರು ಹೇಳಿ ನಿಂದಿಸಿದ್ದಾರೆ,

ಆ ಹಣವನ್ನು ಹಿಂತಿರುಗಿಸುವುದಿಲ್ಲ ನನಗೆ ರಾಜಕೀಯವಾಗಿ ಎದುರಿಸುವ ಶಕ್ತಿ ಇದೆ ಅಂತಾ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ನೋಂದ ಮಂಜಮ್ಮ ಹಳ್ಳೇರ ಮತ್ತು ವಿನಯ ಹಳ್ಳೇರ ಗೋಕರ್ಣ ಠಾಣೆಯಲ್ಲಿ ದೂರು ನೀಡಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಮನಿಸಿ