ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ ಸಮೀಪದ ಕುದುರೆ ಹಳ್ಳದ ಬಳಿ‌ ಪ್ರತ್ಯೇಕ ಅಪಘಾತ ನಡೆದಿದ್ದು, ಬೈಕ್ ಸವಾರ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ.

ಪ್ರಸಾದ್ ರೇವಣಕರ್ ಕಾರು ಪಲ್ಟಿಯಾಗಿರುವುದು

ಗೋವಾದಿಂದ ಹೈದ್ರಬಾದ್‌.ಗೆ ತೆರಳುತ್ತಿದ್ದ ಕಾರು ಹಾಗೂ ಹೊನ್ನಾವರದಿಂದ ಗೋವಾದ ಪಣಜಿಗೆ ತೆರಳು ಬೈಕ್ ನಡುವೆ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಬೈಕ್ ಸವಾರ ಜೀವನ್ ಮೇಸ್ತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಕಾರನಲ್ಲಿದ್ದ ಹೈದ್ರಾಬಾದ ಮೂಲದ ಐವರ ಪೈಕಿ ಇಬ್ಬರೂ ಗಾಯಗೊಂಡಿದ್ದಾರೆ. ಬೈಕ್ ಸವಾರ ಜೀವನ್ ಮೇಸ್ತಾ ಹೊನ್ನಾವರದಲ್ಲಿರುವ ತನ್ನ ಮಾವನ ಮನೆಯಿಂದ ಪಣಜಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಕಾರು ಸಹ ನುಜ್ಜುಗುಜ್ಜಾಗಿದೆ.

ಇನ್ನೂ ಅದೇ ಸ್ಥಳದಿಂದ ನೂರು ಮೀಟರ ಅಂತರದಲ್ಲಿ ಅಂಕೋಲಾ ತಾಲೂಕಿನ ಅವರ್ಸಾದಿಂದ ಕುಮಟಾ ಕಡೆ ಚಲಿಸುತ್ತಿದ್ದ ಕಾರು ಎದುರಿಗೆ ಬಂದ ಜಾನುವಾರು ತಪ್ಪಿಸಲು ಹೋಗಿ ಹೆದ್ದಾರಿ ಮಧ್ಯದಲ್ಲೇ ಕಾರು ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕಾರು ಚಲಿಸುತ್ತಿದ್ದ ಅವರ್ಸಾದ ಪ್ರಸಾದ ರೇವಣಕರ್ ಎಂಬುವವರಿಗೆ ಗಾಯವಾಗಿದೆ.‌ಇವರು ಅಡಿಕೆ ಮಾರಾಟ ಮಾಡಲು ಕುಮಟಾಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಈ ಎರಡು ಅಪಘಾತದಲ್ಲಿ ಗಾಯಗೊಂಡವರನ್ನ 108 ವಾಹನದ ಮೂಲಕ ಕುಮಟಾ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಅಪಘಾತಗಳು ನಡೆದಿದೆ.

ಏಕಾಏಕಿ ಏಖಮುಖ ಸಂಚಾರ ಅಪಘಾತಕ್ಕೆ ಕಾರಣ
ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ ಸಮೀಪದ ನಾಗೂರು ಕ್ರಾಸ್‌ ಬಳಿ ಐಆರ್‌ಬಿ ಕಂಪನಿ ಏಕಾಏಕಿಯಾಗಿ ಏಕಮುಖ ಸಂಚಾರ ಮಾಡಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಗೊಂದಲಕ್ಕೆ ಒಳಗಾಗಿರುವುದರಿಂದಲ್ಲೆ ಈ ಅಪಘಾತ ನಡೆದಿದೆ, ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಯಾವುದೇ ಕಾಮಗಾರಿ ಇಲ್ಲದೆ ಇದ್ದರು ಸಹ ಬೆಳಿಗ್ಗೆ ಇದ್ದ ಎರಡು ಬದಿ ಸಂಚಾರವನ್ನ ಮಧ್ಯಾಹ್ನದ ಸಮಯದಲ್ಲಿ ಏಕಮುಖ ಸಂಚಾರ ಮಾಡಲಾಗಿದೆ. ಇದರಿಂದಾಗಿಯೇ ಈ ರೀತಿ ಸಾಲು ಸಾಲು ಅಪಘಾತ ನಡೆಯುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಮನಿಸಿ