ಸುದ್ದಿಬಿಂದು ಬ್ಯೂರೋ
ದಾಂಡೇಲಿ : ಯಾವುದೋ ಒಂದು ವಿಚಾರಕ್ಕೆ 14ವಿದ್ಯಾರ್ಥಿಗಳು ಒಟ್ಟಿಗೆ ಸೇರಿಕೊಂಡು ಸಾಮೂಹಿಕವಾಗಿ ಕೈ ಕೊಯ್ದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ‌.

ದಾಂಡೇಲಿ ನಗರದಲ್ಲಿನ ಜನತಾ ಶಾಲೆಯ 9ನೇ ತರಗತಿಯ 14ಮಂದಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ತಮ್ಮ ಕೈಗಳ ಮೇಲೆ ಸೆಪ್ಟಿಕ್ ಪಿನ್ ನಿಂದ ರಕ್ತ ಬರುವಂತೆ ಗೀರಿಕೊಂಡಿದ್ದಾರೆ. ಈ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳನ್ನ ಕೇಳಿದ್ದರೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಡುತ್ತಿದ್ದಾರೆ.

ಇದುವರಗೆ ಶಿಕ್ಷಕರಿಗಾಗಲಿ,ಪಾಲಕರಿಗಾಗಲಿ ಸ್ಪಷ್ಟವಾದ ಕಾರಣಗಳು ಗೋತ್ತಾಗಿಲ್ಲ. ಈ ಘಟನೆ ಶಿಕ್ಷಕರ ಗಮನಕ್ಕೆ ಬರುತ್ತಿದ್ದಂತೆ ಶಾಲಾ ಆಡಳಿತ‌ ಮಂಡಳಿ ಹಾಗೂ ಶಿಕ್ಷಕರು ಪಾಲಕರ ಸಭೆಯನ್ನ ಸಹ ಕರೆದು ಈ ಬಗ್ಗೆ ಸಾಕಷ್ಟು ವಿಚಾರಗಳನ್ನ ಚರ್ಚೆ‌ ಮಾಡಿದ್ದಾರೆ. ಆದರೆ ಇದುವರೆಗೆ ನಿಖರವಾಗಿರುವ ಕಾರಣ ತಿಳಿದುಬಂದಿಲ್ಲ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಗಮನಕ್ಕೂ ತರಲಾಗಿದ್ದು, ಅವರು ಕೂಡ ತನಿಖೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿಗಳ ಈ ಕೃತ್ಯದಿಂದಾಗಿ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ವಿದ್ಯಾರ್ಥಿಗಳ ಈ ಕೃತ್ಯವನ್ನ ನೋಡಿದ್ದರೆ ಮೊಬೈಲ್ ಗೇಮ್ ನೋಡಿ ಈರೀತಿಯಾಗಿರುವ ಕೃತ್ಯವನ್ನ ಮಾಡಿಕೊಂಡಿರಬಹುದೇ..? ಎನ್ನುವ ಅನುಮಾನಗಳು ಎದುರಾಗಿದೆ.