ಸುದ್ದಿಬಿಂದು ಬ್ಯೂರೋ
ಮಂಗಳೂರು : ಕೊಟ್ಟಾರ ಗುಪ್ತಚರ ಕಚೇರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗಲೇ ಎಎಸ್ ಐ ಒಬ್ಬರು ಹೃದಯಾಘಾತವಾಗಿ (Heart Attack) ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗಳೂರಿನ ಕೊಟ್ಟಾರದ ಗುಪ್ತಚರ‌ ಕಚೇರಿ ಎಎಸ್ಐ ರಾಜೇಶ್ ಬಿ ಯು(53) ಎಂಬುವವರೆ ಹೃದಯಾಘಾತದಿಂದ ಮೃತಪಟ್ಟವರಾಗಿದ್ದಾರೆ. ಇವರಿಗೆ ಕರ್ತವ್ಯದಲ್ಲಿ ಇರುವಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುತ್ತಿರುವಂತೆ ಮೃತಪಟ್ಟಿದ್ದಾರೆ.

ಉರ್ವಾ ನಿವಾಸಿಯಾಗಿರುವ ರಾಜೇಶ ಬಿ ಯು ಇದೇ ತಿಂಗಳು ಎಸ್ಐ ಆಗಿ ಭಡ್ತಿ ಪಡೆಯಲಿದ್ದರು, 1993ರಲ್ಲಿ ಇವರು ಪೊಲೀಸ್ ಇಲಾಖೆಗೆ ಸೇರಿದ್ದು, ಇದುವರಗೆ ಅನೇಕ ‌ಕಡೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ನಿಧನಕ್ಕೆ ಠಾಣಾ ಸಿಬ್ಬಂದಿಗಳು ಹಾಗೂ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ‌.