ಕಾರವಾರ : ಗೋವಾದಿಂದ ಅಕ್ರಮವಾಗಿ ಕರ್ನಾಟಕ್ಕೆ ಮದ್ಯ ಸಾಗಾಟವಾಗುವುದನ್ನ ಕಟ್ಟುನಿಟ್ಟಾಗಿ ತಡೆಯಬೇಕೆಂದು ಸಿ ಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿ ಅಕ್ರಮ ಗೋವಾ ಮದ್ಯ ಕರ್ನಾಟಕದ ಗಡಿಯೊಳಗೆ ನುಸುಳದಂತೆ ನೋಡಿಕೊಳ್ಳುವಲ್ಲಿ ಖಾಕಿ ಪಡೆ ಅಲರ್ಟ ಆಗಿದ್ದು, ಪ್ರತಿಯೊಂದು ವಾಹನವನ್ನ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.
ಇನ್ನೂ ಮೇಲೆ ಗೋವಾದಿಂದ ಕರ್ನಾಟಕಕ್ಕೆ ಮದ್ತ ಸಾಗಾಟ ಮಾಡುವ ವೇಳೆ ಪೊಲೀಸರ ಬಲೆಗೆ ಏನಾದ್ರೂ ಬಿದ್ದರೆ ಭಾರೀ ದೊಡ್ಡ ಮೊತ್ತದ ದಂಡತೆರಬೇಕಾಗಿದೆ.ಕಳೆದ ಎರಡು ದಿನದ ಹಿಂದೆ ಬೆಂಗಳೂರಲ್ಲಿ ಅಬಕಾರಿ ಅಧಿಕಾರಿಗಳ ಜೊತೆ ಸಿ.ಎಂ ಸಿದ್ದರಾಮಯ್ಯ ಸಭೆ ನಡೆಸಿದ್ದು, ಕಾರವಾರ ಮಾಜಾಳಿ ಚೆಕ್ ಪೋಸ್ಟ್ ಮತ್ತು ಬೆಳಗಾವಿ ಅನಮೋಡ್ ಚೆಕ್ ಪೋಸ್ಟ್ ಸೇರಿ ಕೆಲವು ಕಡೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಿ ಎಂ ತಾಕೀತು ಮಾಡಿದ್ದರು.
ಇದೀಗ ಕಾರವಾರ ಹಾಗೂ ಗೋವಾ ಗಡಿ ಮಾಜಾಳಿ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಗೋವಾದಿಂದ ಕರ್ನಾಟಕ ಪ್ರವೇಶಿಸುವ ಪ್ರತಿಯೊಂದು ವಾಹನವನ್ನ ಕೂಡ ಅಬಕಾರಿ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ.ಗೋವಾದಿಂದ ಅಕ್ರಮ ಮದ್ಯ ಸಾಗಾಟದಿಂದ ರಾಜ್ಯದ ಆರ್ಥಿಕತೆಯ ಮೇಲೆ ಬರೆ ಬಿಳುತ್ತದೆ ಎನ್ನುವ ದೃಷ್ಟಿಯಲ್ಲಿ ಗೋವಾ ಮದ್ಯ ಕರ್ನಾಟಕಕ್ಕೆ ಬರುವುದನ್ನ ತಡೆಯಲು ಕರ್ನಾಟಕ ಸರಕಾರ ಮುಂದಾಗಿದೆ. ಹೀಗಾಗಿ ಗೋವಾದಿಂದ ಬರುವಾಗ ನೀವೆನಾದ್ರೂ ಮದ್ಯದ ಬಾಟಲ್ ಹಿಡಕೊಂಡು ಬಂದ್ರೆ ದಂಡ ಬಿಳೋದು ಮಾತ್ರ ಗ್ಯಾರಂಟಿ,