ಕಾರವಾರ : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಡೀಲ್ ಪ್ರಕರಣದ ಆರೋಪದಡಿಯಲ್ಲಿ ಜೈಲು ಸೇರಿರುವ ಚೈತ್ರಾ ಕುಂದಫುರ ಅವರ ಆಡಿಯೋ ಒಂದರಲ್ಲಿ ಕರಾವಳಿ ಶಾಸಕರೊಬ್ಬರ ಹೆಸರು ಕೇಳಿಬಂದಿದ್ದು ಆ ಆಡಿಯೋ ವೈರಲ್ ಆಗಿದೆ.

ಗೋವಿಂದ ಬಾಬು ಆಪ್ತ ಪ್ರಸಾದ ಹಾಗೂ ಚೈತ್ರಾ ಕುಂದಾಪುರ ಮಾತ್ನಾಡಿರುವ ಆಡಿಯೋ ವೈರಲ್ ಆಗಿದ್ದು, ಚೈತ್ರಾ ಗೆ ಪೋನ್ ಮಾಡಿದ ಪ್ರಸಾದ ಎಂಬಾತ ಆರಂಭದಲ್ಲಿ ಹರಿ ಓಂ ಎನ್ನುವ ಮೂಲಕ ಚೈತ್ರಾ ಬಳಿ ಮಾತು ಆಂಭಿಸುತ್ತಾನೆ, ಪ್ರಸಾದ : ಅವರ ಬಳಿ ಮುಟ್ಟಿಸದೆ. ಆಗ ಚೈತ್ರಾ ಕುಂದಾಪುರ ಕೇಳತ್ತಾರೆ. ಓ..ಆಯತ್ತಾ ಇಷ್ಟ ಬೇಗ.? ಓ 6-22ಆಗಿ ಹೋಯತ್ತಲ್ಲ. ಬೇಗ ಹೋಗಿದ್ರ.? ಪ್ರಸಾದ: ಇಲ್ಲ ಲೇಟಾಗಿತ್ತು. ಚೈತ್ರಾ : ಹೌದ..ಓಹೋ., ಪ್ರಸಾದ: ಆರ ಗಂಟೆ ಹೇಳಿದ್ದರಲ್ಲ ಈಗ ಜಸ್ಟ್ ಮುಟ್ಟಿಸಿದ್ದಷ್ಟೆ. ಚೈತ್ರಾ : ಸರಿ.ಸರಿ…ಅವರಿಗೆ ಪೋನ್ ಮಾಡಿ ಹೇಳಬೇಕಿತ್ತು. ಗಗನ್ ಅವರಿಗೆಲ್ಲಾ ಪೋನ್ ಮಾಡಿ ಹೇಳಬೇಕಿತ್ತು, ಪ್ರಸಾದ : ಗಗನ್ ಗೆ ಹೇಳದೆ. ನಾರ್ಮಲ್ ಸಂಘಟನೆ ಇಬ್ಬರೂ ಹುಡಗರು ಇದ್ದರು ಅಷ್ಟೆ, ಚೈತ್ರಾ : ಎಲ್ಲಿದ್ದಿದ್ದರು..?, ಪ್ರಸಾದ : ಕಾರ್ಕಳ ರೋಡನಲ್ಲಿ ಒಳಗೆ, ಚೈತ್ರಾ : ಮೋಸ್ಟ್ಲಿಸುನೀಲ್ ಕುಮಾರ ಮನೆಗೆ ಹೋಗತ್ತಾರೆನ, ಪ್ರಸಾದ : ಸುನೀಲ್ ಕುಮಾರ ಮನೆಗಾ..?, ಚೈತ್ರಾ : ಇಲ್ಲದ್ದರೆ ಅಲ್ಲಿ ಯಾಕೆ ಬರತ್ತಾರೆ. ಅಂತಾ ಹೇಳಿದ್ದಾರೆ. ಕಾರ್ಕಳ ರಸ್ತೆಯಲ್ಲಿ ಇಬ್ಬರೂ ಯುವಕರು ಹೋಗಿದ್ದಾರೆ ಎಂದು ಪ್ರಸಾದ ಹೇಳಿದ್ದಾರೆ, ಆಗ ಚೈತ್ರಾ ಕುಂದಾಪುರ ಮೋಸ್ಟ್ಲಿ ಸುನೀಲ್ ಕುಮಾರ ಮನೆಗ ಹೋಗಿರಬೇಕು ಅಂತಾ ಹೇಳಿರತ್ತಾರೆ.ಆದರೆ ಚೈತ್ರಾ ಹೇಳಿರೋದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರೋ ಅಥವಾ ಕಾರ್ಕಳ ರಸ್ತೆಯಲ್ಲಿ ಇನ್ನೂ ಬೇರೆ ಯಾರೋ ಸುನೀಲ್ ಕುಮಾರ ಇದ್ದಾರೋ ಅನ್ನುವುದು ಗೊತ್ತಾಗಲ್ಲ.

ಈ ಒಂದು ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದು ಚೈತ್ರಾ ಕುಂದಾಪುರ ಗೆ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಹೋದಾಗ ಮಾಧ್ಯಮದವರ ಎದುರು ಒಂದು ಮಾತನ್ನ ಹೇಳಿದ್ದರು, ಸ್ವಾಮೀಜಿ ಬಂಧನವಾಗಲಿ ಆಗ ಮಷ್ಟು ದೊಡ್ಡ ದೊಡ್ಡವರ ಹೆಸರು ಬಹಿರಂಗವಾಗಲಿದೆ ಅಂತಾ ಹೇಳಿದ್ದರು, ಅವತ್ತು ಚೈತ್ರಾ ಹೇಳಿರೋ ಮಾತು ಮತ್ತು ಈ ಆಡಿಯೋ ಗಮನಿಸಿದರೆ. ಈ ಡೀಲ್ ಪ್ರಕರಣದಲ್ಲಿ ದೊಡ್ಡ ದೊಡ್ಡವರು ಇರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.