ಸುದ್ದಿಬಿಂದು ಬ್ಯೂರೋ
ಕುಮಟಾ : ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರು ಇನ್ನೋರ್ವ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕಡತೋಕ ಅವರ ಬೆಂಬಲದ ಜೊತೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲೀಗ ಪ್ರತಿಷ್ಠಿತರು ಚುನಾವಣಾ ಅಖಾಡಕ್ಕೆ ದುಮಿಕಿದ್ದು, ಚುನಾವಣಾ ಅಬ್ಬರ ಜೋರಾಗಿದೆ. ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಹೈಕಮಾಂಡ್ ಟಿಕೇಟ್ ನಿರಾಕರಿಸಿತ್ತು. ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿವೇದಿತಾ ಆಳ್ವಾರಿಗೆ ಕುಮಟಾ ಕಾಂಗ್ರೆಸ್ ಟಿಕೇಟ್ ನೀಡಿದ್ದು. ಮಾಜಿ ಶಾಸಕಿಗೆ ಶಾಕ್ ಕೊಟ್ಟಿತ್ತು. ಪಕ್ಷವನ್ನು ಕೆಳಸ್ತರದಿಂದ ಕಟ್ಟಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ ಮತ್ತು ಸ್ಥಳೀಯ ಪಟ್ಟಣ ಪಂಚಾಯತ್ ದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವು ಸಾಧಿಸಲು ಪ್ರಯತ್ನ ಪಟ್ಟರು ಟಿಕೇಟ್ ನ್ನು ಕೊನೆ ಕ್ಷಣದಲ್ಲಿ ಟಿಕೆಟ್ ನೀಡದಿರುವುದರ ಬಗ್ಗೆ ಬೇಸರಗೊಂಡು ತಮ್ಮ ಕಾರ್ಯಕರ್ತರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಈಗ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮಾಜಿ ಶಾಸಕಿಗೆ ಇತರ ಟಿಕೇಟ್ ಆಕಾಂಕ್ಷಿಗಳಾದ ಶಿವಾನಂದ ಹೆಗಡೆ ಸೇರಿ ಪಕ್ಷದ ನಾಯಕರು ಕೈ ಜೋಡಿಸಿರುವುದು ಆನೆ ಬಲ ಬಂತಾಗಿದೆ. ಪಕ್ಷದ ನಾಯಕರು ಇವರ ಬಂಡಾಯ ಶಮನ ಮಾಡಲು ಪ್ರಯತ್ನ ನಡೆಸಿದ್ರೂ, ಕಾರ್ಯಕರ್ತರ ಒತ್ತಾಸೆ ಮೇರೆಗೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಮಾಜಿ ಶಾಸಕಿ ಶಾರದಾ ಶೆಟ್ಟಿ ಮುನಿಸಿಕೊಂಡ ಪರಿಣಾಮ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಇವರ ಮುನಿಸನ್ನು ಶಮನ ಮಾಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ರಾಜ್ಯ ನಾಯಕರು ಪ್ರಯತ್ನ ನಡೆಸಿದ್ರೂ ಅದು ಯಶಸ್ವಿಯಾಗಲಿಲ್ಲ. ಹಾಲಿ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಲು ಈಗ ವೇದಿಕೆ ಸಿದ್ದಪಡಿಸಿದ್ದಾರೆ. ನಿನ್ನೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾರದಾ ಶೆಟ್ಟಿ ಮನೆಯಲ್ಲಿ ಹೈಡ್ರಾಮ ನಡೆದಿತ್ತು. ಹಾಲಿ ಅಭ್ಯರ್ಥಿ ನಿವೇದಿತಾ ಆಳ್ವಾ ಅವರು ಆಯೋಜಿಸಿದ್ದ ರೋಡ್ ಶೋ ನಲ್ಲಿದ್ದ ಪಕ್ಷದ ಕಾರ್ಯಕರ್ತರು ರೋಡ್ ಶೋ ಬಿಟ್ಟು ಬಂಡಾಯ ಅಭ್ಯರ್ಥಿ ಶಾರದಾ ಶೆಟ್ಟಿ ಮನೆಗೆ ಕಾರ್ಯಕರ್ತರು ಮುತ್ತಿಗೆ ಪಕ್ಷಗಳ.
ಕಾರ್ಯಕರ್ತರ ಮಾತು ಕೇಳಿದ ಶಾರದಾ ಶೆಟ್ಟಿಯವರು ತಮ್ಮ ಬೆಂಬಲಿಗರ ಜೊತೆ ಚರ್ಚಿಸಿ ಬಂಡಾಯ ನಾಯಕರ ಜೊತೆಗೂಡಿ ನಾಮಪತ್ರ ಸಲ್ಲಿಸಿದ್ರು.ಇದು ಹಾಲಿ ಅಭ್ಯರ್ಥಿ ನಿವೇದಿತಾ ಆಳ್ವಾ ಅವರಿಗೆ ಇರಿಸು ಮುರಿಸು ತಂದಿಟ್ಟಿದೆ. ಇನ್ನೂ ಶಾರದಾ ಶೆಟ್ಟಿ ನಡೆಯ ಬಗ್ಗೆ ಮಾಜಿ ನಾಯಕಿ ಮಾರ್ಗರೇಟ್ ಆಳ್ವಾ ತುಂಬಾ ಸೂಕ್ಷ್ಮವಾಗಿಯೇ ಕೆಣಕಿದ್ದಾರೆ. ಮನೆಯಲ್ಲಿದ್ದ ಶಾರದಾ ಶೆಟ್ಟಿಯವರನ್ನು ರಾಜಕೀಯಕ್ಕೆ ತಂದಿದ್ದು ತಾನೆ. ಈಗ ಪಕ್ಷ್ ಅಭ್ಯರ್ಥಿ ವಿರುದ್ಧ ನಿಲ್ಲುವ ಕೆಲಸ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಕುಮಟಾ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು ಬಲಿಷ್ಠರಾಗಿದರು, ಈಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಾರದಾ ಶೆಟ್ಟಿ ಸ್ಪರ್ಧಿಸಿರುವುದರಿಂದ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಆದರೆ ಕ್ಷಣದ ರಾಜಕೀಯ ಚದುರಂಗದ ಆಟದಲ್ಲಿ ಏನು ಬೇಕಾದರೂ ಆಗಬಹುದು.