ಕಾರವಾರ : ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ತನಗೆ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಮ್ಮ ಹೆಸರಿನಲ್ಲಿ ದೂರು ನೀಡಿರುವುದು ತಿಳಿದು ಬಂದಿದೆ.‌ ನನ್ನಿಂದ ಬೆದರಿಕೆ ಇದೆ ಎಂದು ಒಮ್ಮೆ ಅವರು ನಂಬಿರುವ ದುರ್ಗಾದೇವಿಯ ಮೇಲೆ  ಆಣೆ ಮಾಡಿ ಹೇಳಲಿ. ನಾನು ಆಣೆಗೆ ಸಿದ್ದ ಎಂದು ಮಾಜಿ ಶಾಸಕ ಸತೀಶ ಸೈಲ್ ಸವಾಲು ಹಾಕಿದ್ದಾರೆ.

ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತೀಶ ಸೈಲ್ ಕಳೆದ ಕೆಲ‌ ದಿನಗಳ ಹಿಂದೆ ಜೀವ ಬೆದರಿಕೆ ಇದೆ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಹೇಳಿಕೆ‌ ಕೊಟ್ಟಿರುವುದನ್ನ ಮಾಧ್ಯಮದಲ್ಲಿ ನೋಡಿದ್ದೆ‌ನೆ. ನಾನು ಬೆದರಿಕೆ ಹಾಕುವ ಸಂಸ್ಕೃತಿಯಿಂದ ಬಂದವನಲ್ಲ.ಅದು ನಮ್ಮಗೆ ಗೊತ್ತು ಇಲ್ಲ. ಆದರೆ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದೂರು ದಾಖಲಾಗಿದೆ ಎಂಬುದು ಸಹ ಈಗ ಗೋತ್ತಾಗಿದೆ‌.

ನನ್ನಂದಿ ಬೆದರಿಕೆ ಇದೆ ಹೇಳುವ ಶಾಸಕಿ ರೂಪಲಿ ನಾಯ್ಕ ಅವರೆ ನಂಬಿರುವ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ. ನಾನು ಸಹ ದುರ್ಗಾದೇವಿಯ ಮೇಲೆ ಆಣೆ ಮಾಡಲು ಸಿದ್ದ‌ ಎಂದು ಸೈಲ್ ಹೇಳಿದ್ದಾರೆ.

ಸಹಾಯಕ್ಕಾಗಿ ಹಿಂದೊಮ್ಮೆ ಪೋನ್ ಮಾಡಿದ್ದರು

ಶಾಸಕಿ ರೂಪಾಲಿ ನಾಯ್ಕ ಅವರು ಅಂದು ಶಾಸಕಿ ಆದ ಮೊದಲ ದಿನದಲ್ಲ. ಕಾರವಾರದಿಂದ ಬೈತಖೋಲ್ ಕಡೆ ಹೋಗುವಾಗ ಅವರ ವಾಹನ ತಡೆದು ಕಿರಿಕಿರಿ ಮಾಡಿದ್ದರು.

ಆಗ ಇದೆ ಶಾಸಕಿ ರೂಪಾಲಿ ನಾಯ್ಕ ಅವರು ನನ್ನಗೆ ಪೋನ್ ಮಾತಿ ಸತೀಶ ನನ್ನ ಇಲ್ಲಿ ಜನ ಸ್ವಲ್ಪ ಸಮಸ್ಯೆ ಮಾಡತ್ತಿದ್ದಾರೆ. ಬನ್ನಿ ಅಂತಾ ಕರೆದಿದ್ದರು.
ನಾನು ಶಾಸಕನಿಲ್ಲದೆ ಇದ್ದರೂ ಸಹ ತಕ್ಷಣ ಅಂದಿನ ಸಿಪಿಐ ಅವರಿಗೆ ತಿಳಸಿ ತಕ್ಷಣ ಶಾಸಕರಿಗೆ ಸಮಸ್ಯೆ ಆಗದಂತೆ ನೋಡಕೊಳ್ಳಿ ಅಂತಾ ತಿಳಸಿದ್ದೆ. ಅದು ಸುಳ್ಳು ಅಂತಾ ಶಾಸಕಿಯವರು ಹೇಳಲ್ಲಿ ನೋಡೋಣ.

ನಮ್ಮದ್ದು ಏನಿದ್ದರೂ ಚುನಾವಣೆಗೆ ಮಾತ್ರ ವಿರೋಧ ಪಕ್ಷ ಚುನಾವಣೆ ಮುಗಿದ ಮೇಲೆ ಎಲ್ಲರೂ ಒಂದೆ. ಆದರೆ ಈಗ ಯಾಕೆ ಹೀಗಾತ್ತಾ ಇದೆ ಅಂತಾ ಗೋತ್ತಾಗತ್ತಿಲ್ಲ.ಅವರು ನನ್ನ ಬಗ್ಗೆ ಏನಾದ್ರೂ ಹೇಳಕೊಳ್ಳಲಿ. ಆ ಬಗ್ಗೆ ನಾನು ಇನ್ನ ಮುಂದೆ ಯಾವುದೆ ಚರ್ಚೆ ಮಾಡಲ್ಲ ಎಂದು ಸೈಲ್ ಹೇಳಿದ್ದಾರೆ.