ಭಟ್ಕಳ : ವಾಹನವೊಂದರಲ್ಲಿ ಲಕ್ಷಾಂತರ ರೂಪಾಯಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಗೋಮಾಂಸ ಹಾಗೂ ವಾಹನವನ್ನಕ್ಕೆ ಪಡೆದುಕೊಂಡಿದ್ದು ಆರೋಪಿ ಪರಾರಿಯಾಗಿರುವ ಘಟನೆ ಡೊಂಗರಪಟ್ಟಿ ಬಳಿ ನಡೆದಿದೆ.

ಬೊಲೆರೋ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಭಟ್ಕಳ ನಗರ ಠಾಣೆಯ ಪೊಲೀಸರು ಪಟ್ಟಣದ ಡೊಂಗರಪಟ್ಟಿ ಸಮೀಪ ಬೊಲೇರೋ ವಾಹನದಲ್ಲಿದ್ದ 700ಕೆ ಜಿ ಗೋಮಾಂಸವನ್ನ ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಗೋಮಾಂಸದ ಬೆಲೆ 1ಲಕ್ಷದ 40ಸಾವಿರ ಮಾಂಸದ ಜೊತೆಗೆ ಸಾಗಾಟ ಮಾಡಲು ಬಳಿಸಿದ ಬೊಲೇರೋ ವಾಹನ ವಶಕ್ಕೆ ಪಡೆಯಲಾಗಿದೆ.
ಇನ್ನೂ ವಾಹನ ಚಾಲಕ ಆರೋಪಿ ಪೊಲೀಸರು ದಾಳಿ ನಡೆಸುತ್ತಿರುಂತೆ ಪರಾರಿಯಾಗಿದ್ದಾನೆ‌.

ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿ ಬಂಧನಕ್ಕಾಗಿ ಪೊಲೀಸರು ಜಾಲಾಡುತ್ತಿದ್ದಾರೆ.