ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಖಾಸಗಿ ಚಾನಲ್ ನಡೆಸುತ್ತಿರುವ ಹಳ್ಳಿ ಹೈದ ಪ್ಯಾಟೇಗೆ ಬಂದ ಸೀಸನ್ 2ದಲ್ಲಿ ಭಾಗವಹಿಸಿದ್ದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರದಲ್ಲಿ ಅಂಗಡಿ ಕಳ್ಳತನ ಪ್ರಕರಣದಲ್ಲ ‌‌ಈತ ಜೈಲು ಸೇರಿರುವ ಘಟನೆ ನಡೆದಿದೆ.

ಅಂಕೋಲಾ ತಾಲೂಕಿನ ಹಳವಳ್ಳಿ ಸಮೀಪದ ಬಾಳೆಗದ್ದೆಯ ಭಾಸ್ಕರ ನಾರಾಯಣ ಸಿದ್ದಿ ಬಂಧಿತ ಆರೋಪಿಯಾಗಿದ್ದಾನೆ. ಗುಳ್ಳಾಪುರದ ಜಿ.ಆರ್.ಭಟ್ಟ ಅವರ ವಿಶ್ವಾಸ್ ಜನರಲ್ ಸ್ಟೋರ್ಸ್ ಒಂದರಲ್ಲ ಕಳ್ಳತನ ಮಾಡಿದ್ದ. ಈತ ಇನ್ನೊಂದು ಪ್ರಕರಣದಲ್ಲ ಇದೆ 8ರಂದು ಬಿಡುಗಡೆ ಹೊಂದಿದ್ದು, ಅಂದೆ ರಾತ್ರಿ ಜನರಲ್ ಸ್ಟೋರ್ಸ್ ಕಳ್ಳತ ಮಾಡಿ ತಲೆ ಮರೆಸಿಕೊಂಡಿದ್ದ ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂಗಡಿ ಕಳ್ಳತನ ಮಾಡಿತ ಭಾಸ್ಕರ್ ಸಿದ್ದಿ ಅಂಗಡಿಯಲ್ಲಿದ್ದ 38000 ರೂ ನಗದು ಕಳ್ಳತನ ಮಾಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದು, ಈತನಿಂದ 14,300 ರೂ ವಶಪಡಿಸಿಕೊಳ್ಳಲಾಗಿದೆ.