ಸುದ್ದಿಬಿಂದು ಬ್ಯೂರೋ
ಹುಬ್ಬಳ್ಳಿ:ಹೆಂಡತಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಗಂಡ ಬಳಿಕ ತಾನು ಸಹ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ ಘಟನೆ ಹುಬ್ಬಳ್ಳಿಯ ಕಸಬಾಪೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟಕರ ಓಣಿಯಲ್ಲಿ ನಡೆದಿದೆ.

ಮಲ್ಲಿಕ್ ಎಂಬಾತನೆ ತನ್ನ ಪತ್ನಿಯನ್ನ ಕ್ಷುಲ್ಲಕ‌ ಕಾರಣಕ್ಕೆ ಪತ್ನಿಯ ಜೊತೆ ಜಗಳ ತೆಗೆದು ಆಕೆಯ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಶಾಹಿಸ್ತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಆತ‌ ಸಹ ಆಕೆಯ ಸಿರೆಯಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಕಸಬಾಪೇಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.