ಸುದ್ದಿಬಿಂದು ಬ್ಯೂರೋ
ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿ ಬಂಡಲ್ ಬಳಿ ನಡೆದ ಅಪಘಾತದಲ್ಲಿ (Death)ಮೃತಪಟ್ಟರು ದಕ್ಷಿಣಕನ್ನಡ(Dakshina Kannada)ಜಿಲ್ಲೆಯ ಪುತ್ತೂರಿನವರು ಎಂದು ಗೋತ್ತಾಗಿದ್ದು ಇವರು ಉತ್ತರಕನ್ನಡ(uttarkannada) ಜಿಲ್ಲೆಯ ಶಿರಸಿಯಲ್ಲಿ ನಡೆಯುವ ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟವರಾಗಿದ್ದಾರೆ.

ಅಪಘಾತದಲ್ಲಿ ರಾಮಕೃಷ್ಣ ಬಾಬುರಾವ್(71), ವಿದ್ಯಾಲಕ್ಷ್ಮೀ ರಾಮಕೃಷ್ಣ(65),ಪುಷ್ಪಾ ಮೋಹನ ರಾವ್ (62), ಸುಹಾಸ್ ಗಣೇಶ ರಾವ್(30),ಹಾಗೂ ಕಾರು ಚಾಲಕ ಚೆನ್ನೈನ ಅರವಿಂದ(30)ಎಂಬುವವರೆ ಮೃತಪಟ್ಟವರು ಎಂದು ಗೋತ್ತಾಗಿದೆ.ಇವರೆಲ್ಲರೂ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಶಿರಸಿಯರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು.ಮತ್ತೊಬ್ಬರು ಚೆನ್ನೈನ ಮೂಲದ ವ್ಯಕ್ತಿ ಎಂದು ಗೋತ್ತಾಗಿದೆ. ಬಸ್ಸಿನ ಚಾಲಕನಿಗೂ ಕೂಡಾ ಗಾಯವಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.ಬಸ್ ನಲ್ಲಿ 60ಕ್ಕೂ ಅಧಿಕ ಪ್ರಯಾಣಿಕರಿದ್ದು,ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.