ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಶೈಕ್ಷಣಿಕ ವರ್ಷದ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ 17ದಿನಗಳ ವರಗೆ ರಜೆ ಘೋಷಣೆ ಮಾಡಿದೆ.
ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷವು ಮೇ 29ರಿಂದ ಪ್ರಾರಂಭವಾಯಿತು. ಮೊದಲ ಅವಧಿಯು ಅಕ್ಟೋಬರ್ 2ರ ತನಕ ಇರಲಿದೆ.ನಾಡಿದ್ದು ಸೋಮವಾರದ 23ರಿಂದ ಮಧ್ಯಂತರ ಪರೀಕ್ಷೆಗಳು ಅರಂಭವಾಗಿ 30ರ ತನಕ ನಡೆಯಲಿದೆ.ನಂತರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಆರಂಭವಾಗಲಿದೆ.
2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮೊದಲು ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆ ಘೋಷಣೆಯಾಗಿವೆ.
ಗಮನಿಸಿ