ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ : ಮೀನುಗಾರಿಕೆ ಮುಗಿಸಿಕೊಂಡು ಬಂದರಿಗೆ ಬರುತ್ತಿದ್ದ ಮೀನುಗಾರಿಕಾ ಬೋಟ್ ಹೂಳಿನಲ್ಲಿ ಸಿಲುಕಿಕೊಂಡು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನ ತದಡಿ ಸಮೀಪ ನಡೆದಿದೆ.

ಸದ್ಗುರು ಹಾಗೂ ಮಂಜುಶ್ರೀ ಹೆಸರಿನ ಟ್ರಾಲರ್ ಬೋಟು ತದಡಿ ಬಳಿ ಹೂಳಿನಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ‌ ಬೋಟ್‌ನಲ್ಲಿದ್ದ ಮೀನುಗಾರರು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ಈ ಬೋಟ್ ಅರಬ್ಬೀ ಸಮುದ್ರದಲ್ಲ ಮೀನುಗಾರಿಕೆ ಮುಗಿಸಿಕೊಂಡು ವಾಸ್ ತದಡಿ ಬಂದರಿಗೆ ಬರುತ್ತಿದ್ದ ವೇಳೆ ಅಘನಾಶಿನಿ ನದಿ ಸಮುದ್ರ ಸೇರುವ ಅಳಿವೆಯಲ್ಲಿ ತುಂಬಿಕೊಂಡಿರುವ ಹೂಳಿನಲ್ಲಿ ಸಿಲುಕಿಕೊಂಡಿತ್ತು.

ಈ ಪ್ರದೇಶದಲ್ಲಿ ಪ್ರತಿ ಬಾರಿಯೂ ಸಹ ಹೂಳು ತುಂಬಿಕೊಳ್ಳುತ್ತಲೆ ಇದ್ದು, ಇದರಿಂದ ಮೀನುಗಾರರು ಅಪಾಯಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ತುಂಬಿರುವ ಹೂಳು ತೆರವುಗೊಳಿಸುವಂತೆ ಮೀನುಗಾರರ ಆಗ್ರಹಿಸಿದ್ದಾರೆ.

ಗಮನಿಸಿ