suddibindu.in
ANKOLA:ಅಂಕೋಲಾ : ಚಲಿಸುತ್ತಿದ್ದ ಲಾರಿ ಒಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸುಟ್ಟುಕರಕಲಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಸಮೀಪ ಹೆದ್ದಾರಿಯಲ್ಲಿ ನಡೆದಿದೆ.
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
- ಬಡತನದ ನಡುವೆಯೂ CA ಸಾಧನೆ: ಶಿರಸಿಯ ಹಳ್ಳಿಕಾನಿನ ರಮೇಶ್ ನಾಯ್ಕ್ ಅವರ ಸ್ಪೂರ್ತಿದಾಯಕ ಯಶೋಗಾಥೆ
- ವಾರದ_ಕಥನ…ಕಾಣದ-ಬಿಂಬ ೩, ಸುಬ್ಬಮ್ಮ ಅನಾಥೆಯಲ್ಲ
ಯಲ್ಲಾಪುರ ಕಡೆಯಿಂದ ಅಂಕೋಲಾಕಡೆ ಚಲಿಸುತ್ತಿದ್ದ ಲಾರಿ ಒಂದಕ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಸುಟ್ಟು ಕರಕಲಾಗಿದೆ. ಲಾರಿಯಲ್ಲಿ ಗ್ರೇನೇಟ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಇನ್ನೂ ಲಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಲಾರಿ ಹೊತ್ತಿ ಉರಿದ ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಲಾರಿಗೆ ಹೊತ್ತಿಕೊಂಡ ಬೆಂಕಿಯನ್ನ ನಂದಿಸಲು ಹರಸಾಹಸ ಪಡಲಾಯಿತು.