Suddibindu.in
ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ‌ (ಎಂ.ಇ.ಎಸ್) ಅಭ್ಯರ್ಥಿಯಾಗಿ ನಿರಂಜನ್ ದೇಸಾಯಿಯವರು ನಾಮಪತ್ರ ಸಲ್ಲಿಸಿದ್ದು, ಅವರು ನಾಮಪತ್ರ ಸಲ್ಲಿಕೆ ವೇಳೆ ನಾಡವಿರೋಧಿ ಹೇಳಿಕೆ (Anti-Nada statement) ನೀಡಿದ್ದು ಅವರ ಈ ಹೇಳಿಕೆಯನ್ನ ಕರ್ನಾಟಕ ರಕ್ಷಣಾ ವೇದಿಕೆ ತ್ರೀವವಾಗಿ ಖಂಡಿಸುತ್ತದೆ ಎಂದು ಕರವೇ ಕುಮಟಾ ತಾಲೂಕಾಧ್ಯಕ್ಷ ತಿಮ್ಮಪ್ಪ ನಾಯ್ಕ ಖಂಡಿದ್ದಾರೆ‌.

ಇದನ್ನು ಓದಿ

ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಂ.ಇ.ಎಸ್ ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿರಂಜನ ದೇಸಾಯಿಯವರು ತಮ್ಮ ನಾಮಪತ್ರವನ್ನು ಸಲ್ಲಿಸುವ ವೇಳೆ ನಾಡದ್ರೋಹಿಯಾದ ಕೆಲವು ಮಾತುಗಳನ್ನು ಆಡಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಅವರು ಆಡಿರುವ ನಾಡ ವಿರುದ್ಧ. ಭಾಷೆ.,ಗಡಿ,ನೆಲ,ಜಲ ವಿರುದ್ಧವಾಗಿ ಆಡಿರುವ ಆ ಎಲ್ಲಾ ವಿಚಾರಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ತ್ರೀವವಾಗಿ ಖಂಡಿಸುತ್ತದೆ.

ನಿರಂಜನ ದೇಸಾಯಿ ಹೇಳುವ ಹಾಗೆ ಕಾರವಾರ. ಹಳಿಯಾಳ. ದಾಂಡೇಲಿ. ಜೋಯಿಡಾ.ಬೆಳಗಾವಿ. ಈ ಭಾಗದ ಯಾವ ಜನರು ಕೂಡ ಮಹಾರಾಷ್ಟ್ರಕ್ಕೆ ಸೇರಿಸಿಯೆಂದು ಹೇಳುತ್ತಿಲ್ಲ. ಇಲ್ಲಿಯ ಜನರು ಎಲ್ಲರೂ ಕೂಡ ಕನ್ನಡದ ಈ ನೆಲದಲ್ಲಿ ನಿಷ್ಠೆಯರಾಗಿ ಅತ್ಯಂತ ಅಭಿಮಾನದಿಂದ ಬಾಳುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಈ ರೀತಿ ಭಾವನಾತ್ಮಕವಾದ ಸಂಗತಿಯನ್ನು ತಂದು ಜನರಲ್ಲಿ ಗೊಂದಲ ಮೂಡಿಸುವುದು ಸರಿ ಇಲ್ಲ..

ಅಷ್ಟಕ್ಕೂ ಚುನಾವಣೆ ನೀತಿ ಸಹಿತೆ ಜಾರಿಯಲ್ಲಿದ್ದು. ಭಾಷೆ. ಗಡಿ. ನೆಲ. ಜಲದ ಬಗ್ಗೆ ನಾಡ ವಿರುದ್ಧ ಭಾವನಾತ್ಮಕ ವಿಚಾರಗಳನ್ನು ಉಲ್ಲೇಖಿಸಬಾರದು ಬಹಿರಂಗವಾಗಿ ಹೇಳಬಾರದೆಂದು ಚುನಾವಣೆ ನೀತಿ ಇದೆ. ಹಾಗೆ ಇದರು ಕೂಡ ಚುನಾವಣಾ ಅಭ್ಯರ್ಥಿ ಈ ರೀತಿ ಮಾತಾಡಿದು ಕರ್ನಾಟಕ ರಕ್ಷಣಾ ವೇದಿಕೆ ತ್ರೀವವಾಗಿ ಖಂಡಿಸುತ್ತದೆ. ಅವರ ಈ ಹೇಳಿಕೆ ಬಹುತೇಕ ಚುನಾವಣೆ ನೀತಿಗೆ ವಿರುದ್ಧವಾದುದ್ದು. ಈ ಕಾರಣಕ್ಕಾಗಿ ಚುನಾವಣಾ ಆಯೋಗ ಈ ವಿಚಾರವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.

ನಿರಂಜನ ದೇಸಾಯಿಯವರು ಚುನಾವಣೆ ಸಂದರ್ಭದಲ್ಲಿ ಬಂದು ನಾಡ ವಿರೋಧಿಯಾದ. ಭಾಷೆ ವಿರೋಧಿಯಾದ. ಈ ತರಹದ ಹೇಳಿಕೆಗಳನ್ನು ಕೊಡುವ ಮೂಲಕ ಸಂಘರ್ಷವಾದ ವಾತಾವರಣವನ್ನು ಉಂಟು ಮಾಡಬಾರದು.ಹಾಗೇನಾದ್ರೂ ಉಂಟು ಮಾಡುವುದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು .

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) (MES) ಇದು ಮಹಾರಾಷ್ಟ್ರದಲ್ಲಿ ಏಕೀಕರಣ ಮಾಡಲಿ. ಹೋರಾಟ ಮಾಡಲಿ. (ಎಂಇಎಸ್‌)ಗೆ ಕರ್ನಾಟಕದಲ್ಲಿ ಏನು ಕೆಲಸ ಬಹಳ ವರ್ಷಗಳಿಂದ ಎಂಇಎಸ್ ಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ನಾಡ ಸೇನಾನಿ ಸನ್ಮಾನ್ಯ ಶ್ರೀ ಟಿ ಎ ನಾರಾಯಣಗೌಡ್ರು ಒಂದು ಗತಿ ಬೆಳಗಾವಿಯಲ್ಲಿ ತೋರಿಸಿದ್ದಾರೆ.

ಪದೇ ಪದೇ ಗಡಿ ಭಾಷೆ ಕನ್ನಡಿಗರನ್ನು ಕೆಣಕುವ ಕೆಲಸ ( ಎಂಇಎಸ) ಮಾಡುತ್ತಾ ಬಂದಿದೆ. ಅದಕ್ಕೆ ತಕ್ಕ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ನೀಡುತ್ತಾ ಬಂದಿದೆ ಎಂಇಎಸ್ ಸಂಘಟನೆ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಒತ್ತಾಯಿಸಿದ್ದಾರೆ.