ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಆರ್ಥಿಕ ವ್ಯವಹಾರ ನಡೆಸುವ ಕೆಲ ಸಹಕಾರಿ ಸಂಸ್ಥೆಗಳು ಸಾಲ ವಸೂಲಾತಿಗಾಗಿ ಗ್ರಾಹಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಕುಮಟಾದ ಗೋಧಾವರಿ ಸೌಹಾರ್ದ ಸಹಕಾರಿ ಸಂಸ್ಥೆಗೆ ಜೆಎಂಎಫ್‍ಸಿ ನ್ಯಾಯಾಲಯ 1ಸಾವಿರ ದಂಡ ಮತ್ತು 5 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.
ಗೋದಾವರಿ ಸೌಹಾರ್ದ ಕ್ರೆಡಿಟ್ ಸೊಸೈಟಿಯು ಆರೋಪಿತಳಾದ ಸವಿತಾ ಶೇಷಗಿರಿ ನಾಯ್ಕ ಎನ್ನುವವಳು ತನ್ನ ಬ್ಯಾಕಿನಲ್ಲಿ 520000 ರೂಪಾಯಿ ಸಾಲ ಪಡೆದಿದ್ದಾಗಿಯೂ ಅದನ್ನು ಮರುಪಾವತಿಸಲು ಚೆಕ್ ನೀಡಿದ್ದರು ಆದರೆ ಅದು ಬೌನ್ಸ್ ಕಾರಣ ಆಕೆಯು ಬೌನ್ಸ್ ಆಗುವಂತಹ ಚೆಕ್ ನೀಡಿ ಮೊಸ ಮಾಡಿದ್ದಾಳೆ
ಕಾರಣ ಅವಳಿಗೆ ಶಿಕ್ಷೆ ವಿಧಿಸಿ ಆಕೆಯ ಚೆಕ್ ನಲ್ಲಿ ಬರೆದ ಹಣ 5,54000 ಹಣ ಹಾಗೂ ಅಷ್ಟೇ ಮೊತ್ತದ ಹಣವನ್ನು ಪರಿಹಾರ ರೂಪದಲ್ಲಿ ಕೊಡಿಸಬೇಕೆಂದು ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಸೂಕ್ತ ವಿಚಾರಣೆ ನಡೆಸಿದ ಕುಮಟಾ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾರತಿ ರಾಯನ್ನಣವರ್ ರವರು ಆರೋಪಿತಳನ್ನು ನಿರಪರಾಧಿ ಎಂದು ಬಿಡುಗಡೆ ಗೊಳಿಸಿ ಸುಳ್ಳು ಪ್ರಕರಣ ದಾಖಲು ಮಾಡಿದ ಕಾರಣ ಆರೋಪಿತಳಿಗೆ ಫಿರ್ಯಾದಿ ಬ್ಯಾಂಕ್ 5000 ರೂಪಾಯಿ ಪರಿಹಾರ ನೀಡಬೇಕೆಂದು ಹಾಗೂ ಆರೋಪಿತಳು ದೂರುದಾರ ಬ್ಯಾಂಕಿನ ವಿರುದ್ಧ ಪರಿಹಾರಕ್ಕಾಗಿ. ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಕಾರಣ ಸಿವಿಲ್. ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶ ನೀಡಲಾಗಿದೆ.
ಅಲ್ಲದೆ ಗೋದಾವರಿ ಸೌಹಾರ್ದ ಸಂಸ್ಥೆಯಿಂದ ನ್ಯಾಯಾಲಯಕ್ಕೆ 1000 ರುಪಾಯಿ ದಂಡ ತುಂಬುವಂತೆ ಆದೇಶ ಹೊರಡಿಸಿದ್ದಾರೆ.
ಆರೋಪಿತಳ ಪರವಾಗಿ ಪ್ರಶಾಂತ ನಾಯ್ಕ ವಕೀಲರು ಬೆಟ್ಕುಳಿ ವಾದಿಸಿದ್ದರು..
ಇದನ್ನೂ ಓದಿ