ಸುದ್ದಿಬಿಂದು ಬ್ಯೂರೋ ವರದಿ
Hubli :ಹುಬ್ಬಳ್ಳಿ: ವ್ಯವಸ್ಥೆಯ ನಾಲ್ಕನೇಯ ಅಂಗವೆಂದೆ ಕರೆಸಿಕೊಳ್ಳುವ ಮೀಡಿಯಾದಲ್ಲಿ ಬಂದಿರುವ ಕೆಲವು ಕ್ರಿಮಿಗಳು ಎಷ್ಟೊಂದು ಕೀಳು ಮಟ್ಟಕ್ಕೀಳಿದು ಮಾಧ್ಯಮದ ಹೆಸರನ್ನ ಕೆಡಿಸುತ್ತಿದ್ದಾರೆ ಎಂಬುದಕ್ಕೆ ಪ್ರತ್ಯಕ್ಷ್ಯ ಸಾಕ್ಷಿ ಬೇಕಿದ್ದರೇ, ನೀವು ನೇರವಾಗಿ ವಾಣಿಜ್ಯನಗರಿಯ ಬ್ಲೇಡ್ ಪರಶ್ಯಾನ ನೋಡಲೇಬೇಕು.
ಈತನನ್ನ ಚಾನಲ್ ಹೊರಗೆ ಹಾಕಿದರೂ ಈಗಲೂ ಅದೇ ಹೆಸರು ಹೇಳಿಕೊಂಡು ಎತ್ತುವಳಿಯನ್ನ ಮುಂದುವರೆಸಿದ್ದಾನೆ. ಇಷ್ಟೊಂದು ಅಸಹ್ಯದ ಈತ ಮಾತನಾಡುವುದು ಮಾತ್ರ ಬೇರೆ.
ಇಡೀ ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಕರಣದಲ್ಲಿ ಹತ್ಯೆಗೀಡಾದ ಯುವತಿಯ ತಂದೆಯ ಬಳಿ ಲಿಸ್ಟ್ ಮಾಡಿ ಲಕ್ಷ ಲಕ್ಷ ಪೀಕಿದ್ದ. ಇದೇ ಕಾರಣಕ್ಕೆ ಚಾನಲ್‌ನವರು ಹೊರಗೆ ಹಾಕಿದ್ದರೂ ಅದನ್ನ ಹೇಳಿಕೊಳ್ಳದ ಈತ, ವಸೂಲಿ ಮುಂದುವರೆಸಿದ್ದಾನೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ದೀಪಾವಳಿಗೆ ಸಿಹಿ ಹಂಚಿದ್ದರು. ಈ ಸಮಯದಲ್ಲಿ ಕ್ಯಾಮರಾಮನ್ ಅವರ ಜೊತೆ ಪೋಟೊ ತೆಗೆಸಿಕೊಂಡಿದ್ದ. ಅದನ್ನೇ ವ್ಯಂಗ್ಯವಾಡಿರುವ ಈತ ಲೋಕಸಭಾ ಚುನಾವಣೆ ಸಮಯದಲ್ಲಿ ಅವರ ಬಳಿ ಪಾಕೇಟ್ ಪಡೆದಿರುವುದನ್ನ ಮರೆತ್ತಿದ್ದಾನೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ದೀಪಾವಳಿಯ ಸಮಯದಲ್ಲಿ ಸಿಹಿಯ ಜೊತೆಗೆ ಉಡುಗೊರೆಯನ್ನ ನೀಡಿದ್ರು. ಅದನ್ನ ತಾನೂ ಪಡೆದುಕೊಂಡು ಹೋಗಿ, ಆ ಬಗ್ಗೆ ಏನೋ ಗಂಡಾಂತರವಾಗಿದೆ ಎಂದು ಪುಂಗತೊಡಗಿದ್ದಾನೆ.
ಈ ಬ್ಲೇಡ್ ಪರಶ್ಯಾ ಯಾವತ್ತೂ ಜನರಿಗೆ ಉಪಯೋಗ ಆಗುವ ಸುದ್ದಿಯನ್ನ ಮಾಡಿಲ್ಲ. ಓನ್ಲಿ ಬಕೇಟ್. ಪ್ಲಾಸ್ಟಿಕ್‌ನಿಂದ ಹಿಡಿದು ಮೊನ್ನೆ ಮೊನ್ನೆಯವರೆಗೆ 25ಸಾವಿರ ಎಲ್ಲಿ ಪಡೆದ ಎನ್ನುವ ಮಾಹಿತಿ ಸುದ್ದಿಬಿಂದುಗೆ ಇದೆ. ಅವಶ್ಯಕತೆಬಿದ್ದರೇ, ಸಾಕ್ಷಿ ಸಮೇತ ಹೊರಗೆ ಹಾಕಲಾಗುವುದು.
ಗಮನಿಸಿ