www.suddibindu.in
Ankola:ಅಂಕೋಲಾ : ಸಾಮಾಜಿಕ ಸೇವೆ, ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲಿ ತನ್ನದೆ ಆದ ವಿಶೇಷ ಸಾಧನೆಯ ಮೂಲಕ ಗುರುತಿಸಿಕೊಂಡು ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಪ್ರವರ್ಧಮಾನದಲ್ಲಿ ಇರುವ ಅಡ್ಲೂರಿನ ಮಂಜುನಾಥ ನಾಯಕ ಹಾಗೂ ಗೋಪು ನಾಯಕ. ಅಡ್ಲೂರು ಸಹೋದರರು ಅಂಕೋಲೆಯ ಶ್ರೀ ದೊಡ್ಡದೇವರಾದ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಸಹಸ್ರಾರು ಭಕ್ತಾಧಿಗಳಿಗೆ ಅನ್ನದಾನ ಮಾಡುವ ಮೂಲಕ ಧನ್ಯತೆ ಮೆರೆದಿದ್ದಾರೆ.

ಶ್ರೀಅನ್ನಪೂರ್ಣ ಸೌಹಾರ್ದ ಸಹಕಾರಿಯ ಅಧ್ಯಕ್ಷ ಮಂಜುನಾಥ ನಾಯಕ ಮತ್ತು ಉಪಾಧ್ಯಕ್ಷ ಗೋಪು ನಾಯಕ ಅಡ್ಲುರ್ ಕುಟುಂಬದವರು ಶ್ರಾವಣ ಮಾಸದ ಮೂರನೇ ಶನಿವಾರದಂದು ಅನ್ನ ಸಂತರ್ಪಣೆಯ ಸಂಪೂರ್ಣ ಪ್ರಾಯೋಜಕತ್ವ ವಹಿಸಿ ಸಾಂಘವಾಗಿ ಪೂಜೆ ನೆರವೇರಿಸಿ ಅನ್ನ ಪ್ರಸಾದವನ್ನು ಭಕ್ತರಿಗೆ ವಿತರಿಸಿ ಪಾವನರಾದರು.

ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡ 5000 ಕ್ಕಿಂತಲೂ ಹೆಚ್ಚಿನ ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತಾಧಿಗಳು ಅನ್ನ ಸಂತರ್ಪಣೆಯ ಶುಚಿ ರುಚಿಯಾದ ಅನ್ನ ಪ್ರಸಾದ ಸ್ವೀಕರಿಸಿದರು.ಮಳೆ ವಿಪರೀತ ಸುರಿಯುತ್ತಿದ್ದರೂ ದೇವರ ಪ್ರಸಾದದ ಮೇಲಿರುವ ಗೌರವ ಮತ್ತು ಶ್ರದ್ದೆಯಿಂದ 5000 ಕ್ಕಿಂತಲೂ ಹೆಚ್ಚು ಭಕ್ತರು ಗಂಟೆಗಟ್ಟಲೆ ಕಾದು ಪ್ರಸಾದ ಸ್ವೀಕರಿಸಿ ದೇವರ ಕ್ರಪೆಗೆ ಪಾತ್ರರಾದರು.

ಶ್ರೀ ವೆಂಕಟರಮಣ ದೇವರಿಗೆ ಮಂಜುನಾಥ ನಾಯಕ ಮತ್ತು ಗೋಪು ನಾಯಕ ಅಡ್ಲುರ್ ಕುಟುಂಬ ಪೂಜೆ ನೆರವೇರಿಸಿ. ಅನ್ನ ಪಾತ್ರೆಗೆ ಪೂಜೆ ಸಲ್ಲಿಸಿ ಪ್ರಸಾದವನ್ನು ನೀಡಲು ಪ್ರಾರಂಭಿಸಿದರು. ಬಡವ ಬಲ್ಲಿದರೆನ್ನದೆ ಸಹಸ್ರ ಸಹಸ್ರ ಭಕ್ತರು ಪ್ರಸಾದವನ್ನು ಶಾಂತತೆಯಿಂದ ಸ್ವೀಕರಿಸಿ ಪುನೀತರಾದರು.

ಪ್ರಸಾದ ನೀಡಲು ಬಂದ ನೂರಾರು ಯುವಕರು
ಇಲ್ಲಿ ಶ್ರೀ ವೆಂಕಟರಮಣ ದೇವರ ಪೂಜೆ ಮತ್ತು ಸೇವೆಯಲ್ಲಿ ಪಾಲ್ಗೊಳ್ಳುವುದೇ ಒಂದು ವಿಶೇಷತೆ. ಈ ಸುಯೋಗ ಎಲ್ಲರಿಗೂ ಒದಗಿ ಬರಲಾರದು ಎನ್ನುವುದು ಹಿರಿಯರ ಅಭಿಪ್ರಾಯ. ಈ ಕಾರಣಕ್ಕೆ ಶ್ರಾವಣ ಮಾಸದ ಪೂಜೆಯಲ್ಲಿ ಸೇವೆ ಮಾಡುವುದು ಒಂದು ಸುಯೋಗವೆಂದು ತಿಳಿದು ಹಲವರು ಪ್ರಸಾದ್ ವಿತರಣೆಯಲ್ಲಿ ಪಾಲ್ಗೊಂಡರು.

ಈ ಅನ್ನ ಸಂತರ್ಪಣಾ ಕಾರ್ಯದಲ್ಲಿ ಹಲವು ಪ್ರಮುಖರು ಪಾಲ್ಗೊಂಡು ಶ್ರೀ ದೇವರಿಗೆ ಪೂಜೆ ಸಲ್ಲಿಸುವುದರ ಜೊತೆ ಅನ್ನ ಸಂತರ್ಪಣೆಯಲ್ಲಿಯೂ ಭಾಗಿಗಳಾಗಿ ಶ್ರೀ ದೇವರಿಗೆ ಭಕ್ತಿ ಸಮರ್ಪಿಸಿದರು.

ನಿಷ್ಕಮ್ಮಶ ಮನಸ್ಸೆ ಇವರ ಆಸ್ತಿ : ಶಾಸಕ ಸತೀಶ್ ಸೈಲ್
ಗೋಪು ಹಾಗೂ ಮಂಜು ಸಹೋದರರು ನನ್ನ ಹತ್ತಿರದ ಒಡನಾಡಿಗಳು. ನಿಷ್ಕಮ್ಮಶ ಮನಸ್ಸೆ ಇವರ ಆಸ್ತಿ. ಎಲ್ಲರೊಂದಿಗೆ ಒಂದಾಗಿ ಈ ಸಮಾಜದಲ್ಲಿ ಒಂದಾಗಿರುವ ಈ ಸಹೋದರು ತಮ್ಮ ಹೃದಯ ವೈಶಾಲ್ಯತೆ ಹಾಗೂ ಧಾರ್ಮಿಕ ಆಚರಣೆಯ ಭಾಗವಾಗಿ ಸಹಸ್ರಾರು ಜನರಿಗೆ ಅನ್ನ ಪ್ರಸಾದ ನೀಡಿ ಆರ್ಶಿವಾದ ಹಾಗೂ ಹೆಮ್ಮೆಗೆ ಪಾತ್ರರಾಗಿರವದು ಖುಷಿ ತಂದಿದೆ. ಈ ಸಹೋದರರ ಮಹತ್ಕಾರ್ಯ ಇನ್ನು ಹೆಚ್ಚಾಗಿ ಅಕ್ಷಯ ಪಾತ್ರೆಯಾಗಲಿ.

ಇದನ್ನೂ ಓದಿ

.