ಸುದ್ದಿಬಿಂದು ಬ್ಯೂರೋ
ಕುಮಟ : ಕಾಂಗ್ರೆಸ್ ಮುಖಂಡನೊಂದಿಗೆ ಮಹಿಳೆಯ ಹೆಸರು ಸೇರಿಸಿ ಕೆಟ್ಟ ಪದ ಬಳಕೆ ಆರೋಪ ಮಾಡಿದ ಯುವಕನೋರ್ವನಿಗೆ ಚಪ್ಪಲಿಯಿಂದ ಹೊಡೆದಿದ್ದ ಮಹಿಳೆ ಹಾಗೂ ಹೊಡೆಯಲು ಪ್ರೋತ್ಸಾಹ ನೀಡಿದ ಕಾಂಗ್ರೆಸ್ ಮುಖಂಡ(Congress leader) ಸೇರಿ ನಾಲ್ವರ ವಿರುದ್ಧ ಕುಮಟ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ (fir) ದಾಖಲಾಗಿದೆ.

ಸವಿತಾ ದೇಶಭಂಡಾರಿ, ಗಜಾನನ ನಾಯ್ಕ,ಪ್ರಮೋದ ಭಂಡಾರಿ, ಕಿರಣ ಪಟಗಾ ಈ ನಾಲ್ವರ ವಿರುದ್ದ 204/2023ರ ಅಡಿಯಲ್ಲಿ ದೂರು ದಾಖಲಾಗಿದೆ. ಈಗಾಗಲೆ ಈ ನಾಲ್ವರನ್ನ ಕುಮಟ ಸರಕಾರಿ ಆಸ್ಪತ್ರೆ ಕರೆದೊಯ್ಯದ್ದು ವೈದ್ಯಕೀಯ ತಪಾಷಣೆಗೆ ಒಳಪಡಿಸಿದ್ದು, ನ್ಯಾಯಾಧೀಶರ ಎದುರು ಹಾಜರು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಉತ್ತರಕನ್ನಡ ಜಿಲ್ಲೆಯ(Utarakannda) ಕುಮಟ ತಾಲೂಕಿನ ಅಳ್ವೆಕೋಡಿಯ ಸವಿತಾ ಎಂಬುವವರ ಮನೆಗೆ ಬಂದು ಹೋಗುತಿದ್ದ ಕಾಂಗ್ರೆಸ್ ಮುಖಂಡ ಗಜು ನಾಯ್ಕ ರವರ ಕುರಿತು ಮಹಿಳೆಗೆ ಕೆಟ್ಟ ಪದ ಬಳಸಿದ್ದಾನೆ ಎಂದು ಮಹಿಳೆ ಆರೋಪಿಸಿ ಆ ಯುವಕನಿಗೆ ಸವಿತಾ ಪಟಗಾರ ಹಾಗೂ ಅಳ್ವೆಕೋಡಿಯ ಗಜು ನಾಯ್ಕ ಸೇರಿ ಅಳ್ವೆಕೋಡಿಯ ಹುಂಡಾಯ್ ಶೋರೂಮ್(Hyundai showroom) ಕಾಂಪೌಂಡ್ ಒಳಗೆ ಹಿಗ್ಗಾಮುಗ್ಗ ಥಳಿಸಿ, ಯುವಕನ ಮೇಲೆ ಹಲ್ಲೆ ಮಾಡಿದ ವಿಡಿಯೋ ವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದಾಗಿ ಯುವಕಿನಿಗೆ ಹಾಗೂ ಅವರ ಕುಟುಂಬಸ್ಥರು ಅವಮಾನಕ್ಕೆ ಒಳಗಾಗುವಂತಾಗಿತ್ತು.

ಹಲ್ಲೆಗೆ ಒಳಗಾಗಿದ್ದ ಅಮಾಯಕ ಯುವಕ ಕೃಷ್ಣಾ ನಾಯ್ಕ ಅವರ ಪರವಾಗಿ ಅಳ್ವೆಕೋಡಿಯ ಪ್ರಜ್ಞಾವಂತ ನಾಗರಿಕರು ಹಲ್ಲೆ ನಡೆಸಿದವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದರು, ಕೃಷ್ಣಾ ನಾಯ್ಕ ಎಂಬಾತನಿಗೆ ಕರೆದು ಬುದ್ದಿ ಹೇಳದೆ ಇವರೆ ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡಿರುವುದನ್ನ ವಿರೋಧಿಸಲಾಗಿತ್ತು.