ಸುದ್ದಿಬಿಂದು ಬ್ಯೂರೋ ವರದಿ(suddibindu Digital News)
Kumta:ಕುಮಟಾ: ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿ ಬಿದ್ದು, ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಮಟಾ ಮಣಕಿ ಬಳಿ ನಡೆದಿದೆ.
ಮಹಾರಾಷ್ಟ್ರದಲ್ಲಿದ್ದ ಕೇರಳ ಮೂಲದ ಮೂವರು ಸೇರಿಕೊಂಡು ಕಾರಿನಲ್ಲಿ ಕೇರಳಕ್ಕೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 7ಗಂಟೆ ಸುಮಾರಿಗೆ ಕುಮಟಾ ಸಮೀಪ ಚಲಿಸುತ್ತಿದ್ದ ವೇಳೆ ಎದುರಿಗೆ ಬಂದ ಜಾನುವಾರು ಒಂದನ್ನ ತಪ್ಪಿಸಲು ಹೋಗಿದ್ದರಿಂದ ಹೆದ್ದಾರಿ ಪಕ್ಕದ ಸಮಾರು 30ಅಡಿ ಆಳಕ್ಕೆ ಉರುಳಿ ಬಿದ್ದಿದೆ.
ಆದರೆ ಕಾರಿನಲ್ಲಿದ್ದ ಮೂವರು ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಗಮನಿಸಿ