ಸುದ್ದಿಬಿಂದು ಬ್ಯೂರೋ
ಕುಮಟ : ಉತ್ತರಕನ್ನಡ(Uttarkannada) ಜಿಲ್ಲೆಯ ಕುಮಟ ತಾಲೂಕಿನ ಜೇಷ್ಠಪುರದ ನೇಸರ್ ರೆಸಾರ್ಟ್(Nesara Resort) ಒಂದರಲ್ಲಿ ವೈಶ್ಯಾವಾಟಿಕೆ (Vaisyavatike) ನಡೆಯುತ್ತಿದ್ದ ವೇಳೆ ಡಿವೈಎಸ್ಪಿ ಶ್ರೀಕಾಂತ ಅವರ ತಂಡದಿಂದ ದಾಳಿ ನಡೆಸಿದ್ದು, ಬೆಂಗಳೂರು ಹಾಗೂ ಕಲ್ಕತ್ತಾ ಹಮೂಲದ ಯುವತಿಯರನ್ನ ರಕ್ಷಣೆ ಮಾಡಲಾಗಿದೆ.
ಕುಮಟ ತಾಲೂಕಿನ ಬಾಡ ಗ್ರಾಮ ಜೇಷ್ಠಪುರದಲ್ಲಿರುವ ನೇಸರ ರೆಸಾರ್ಟ್(Bada Resort)ಒಂದರಲ್ಲಿ ಕಳೆದ ಅನೇಕ ವರ್ಷಗಳಿಂದ ವೈಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಆರೋಪಗಳು, ಕೇಳಿ ಬಂದಿದ್ದು, ಹಾಗೇನೆ ಇಂದು ರವಿವಾರ ರಾತ್ರಿ ಸಹ ಇದೆ ರೆಸಾರ್ಟ್ ನಲ್ಲಿ ವೈಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಅವರಿಗೆ ಮಾಹಿತಿ ಲಭ್ಯವಾಗಿದ್ದು, ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಡಿವೈಎಸ್ಪಿ ಶ್ರೀಕಾಂತ ಅವರ ತಂಡ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ಹಲವು ಯುವಕರನ್ನ ಬಂಧಿಸಿದ್ದಾರೆ.
ಈ ಬಗ್ಗೆ ಕುಮಟಾ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.