ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರಕಾರ ಇದೀಗ ಮತ್ತೆ ಮೂರುದಿನ ಕಾಲಾವಕಾಶ ನೀಡಿತ್ತು. ಆದರೆ ಸರ್ವರ್ ಸಮಸ್ಯೆಯಿಂದ(Server problem) ಎರಡು ದಿನ ಕಳೆದು ಹೋಗಿದ್ದು ಕಾರ್ಡದಾರು ಅಲೆದಾಡುವುದರಲ್ಲೆ ಸುತ್ತಾಗಿದ್ದಾರೆ.
ಈ ತಿಂಗಳ 8-9-10 ಈ ಮೂರುದಿನದಲ್ಲಿ ರಾಜ್ಯದಲ್ಲಿನ ರೇಷನ್ ಕಾರ್ಡ್ ದಾರರು ತಿದ್ದುಪಡಿಗಾಗಿ ಬೇಕಾಗಿರುವ ಎಲ್ಲಾ ದಾಖಲೆಗಳನ್ನ (records)ಸಿದ್ದಪಡಿಸಿಕೊಂಡಿದ್ದರು, ಆದರೆ ಈಗ ಗ್ರಾಮ ಒನ್,(Village Own,)ಹಾಗೂ ಕರ್ನಾಟಕ ಒನ್ ಗಳಿಗೆ(Karnataka Own) ಹೋಗಿ ತಿದ್ದುಪಡಿ ಇದೆ ಅಂತಾ ಹೋದರೆ ಅಲ್ಲಿ ಸರ್ವರ್ ಸಮಸ್ಯೆ ಕಾಣುತ್ತಿದೆ.
ಪ್ರತಿಬಾರಿಯೂ ಸಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಟ್ಟಾಗಲ್ಲೆಲ್ಲಾ ಇದೆ ಸಮಸ್ಯೆ ಎದುರಾಗುತ್ತಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.ಆಗೊಮ್ಮೆ ಈಗೊಮ್ಮೆ ಅವಕಾಶ ನೀಡುವ ಬದಲಿಗೆ ನಿರಂತರವಾಗಿ ಈ ಪ್ರಕ್ರಿಯೆ ಇಟ್ಟಿದ್ದರೆ ಈ ರೀತಿ ಸಮಸ್ಯೆ ಉಂಟಾಗುತ್ತಿರಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಮೂರು,ನಾಲ್ಕು ತಿಂಗಳಿಗೊಮ್ಮೆ ತಿದ್ದುಪಡಿಗೆ ಅವಕಾಶ ಕೊಟ್ಟರೆ ಎಲ್ಲರೂ ಒಮ್ಮೆ ಮುತ್ತಿಗೆ ಹಾಕುವಂತಾಗುತ್ತದೆ. ಹೀಗಾಗಿ ಸರ್ವರ್ ಸಮಸ್ಯೆ ತಲೆದೊರುತ್ತದೆ ಎನ್ನುವು ಸಾರ್ವಜನಿಕರವಾದ, ಇದರಿಂದ ಸಾರ್ವಜನಿಕರು ಪದೆ ಪದೆ ಅಲೆದಾಡುವಂತಾಗಿದೆ.ಸರ್ವರ್ ಸಮಸ್ಯೆ ಬಗ್ಗೆ ಸರಕಾರ ಬೇರೆ ಮಾರ್ಗವನ್ನ ಕಂಡುಕೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.