suddibindu.in
ಕಾರವಾರ: ಕಳೆದ ಹಲವಾರು ವರ್ಷಗಳಿಂದ ನಿಷ್ಕ್ರಿಯವಾಗಿ ನಿಗೂಢವಗಿ ಕುಂಭಕರ್ಣನಂತೆ ನಿದ್ರಾವಸ್ಥೆಯಲ್ಲಿ ಇದ್ದ (MP Ananthakumar Hegde,) ಅನಂತಕುಮಾರ ಹೆಗಡೆಯವರು ಇತ್ತೀಚೆಗೆ ಎದ್ದುಬಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಗಮನಿಸಿದರೆ ತಾನೊಬ್ಬ ಸಂವಿಧಾನದ ಅಡಿಯಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾದ ಸಂಸದ ಎನ್ನುವುದನ್ನು ಮರೆತಂತಿದೆ ಎಂದು ಉತ್ತರಕನ್ನಡ ಕಾಂಗ್ರೆಸ್(Uttara Kannada Congress,)ಉಪಾಧ್ಯಕ್ಷ ಆರ್ ಎಚ್ ನಾಯ್ಕ ವಿರುದ್ಧ ಮಾಧ್ಯಮಗಳಿಗೆ‌ ನೀಡಿರುವ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ:-ನನ್ನನ್ನು”ಬಿಟ್ಟುಬಿಡಿ” ಎಂದಿದ್ದೆ ಆದರೆ ಅವರು “ಬಿಡುತ್ತಿಲ್ಲ

ತಾನು ಬಾಯಿಗೆ ಬಂದಂತೆ ಏನೇ ಮಾತನಾಡಿದರೂ ಉತ್ತರ ಕನ್ನಡ ಲೋಕಾಸಭಾ(Lok Sabha)ಕ್ಷೇತ್ರದ ಜನತೆ ಸಹಿಸಿಕೊಂಡು ಸುಮ್ಮನಿರುತ್ತಾರೆ ಎನ್ನುವ ಮನೋಸ್ಥಿತಿಗೆ ತಲುಪಿದ್ದಾರೆ ಅನಂತಕುಮಾರ ಹೆಗಡೆಯವರು.6ನೇ ಬಾರಿ ಸಂಸದ ಸದಸ್ಯರಾಗಿ ಆಯ್ಕೆಯಾಗಿ 5 ವರ್ಷ ಪೂರೈಸುತ್ತಿರುವ ಈ ಸಂಧರ್ಭದಲ್ಲಿ ಮತದಾರರ ಮುಂದೆ ಸಾರ್ವಜನಿಕವಾಗಿ ತನ್ನ ಸಾಧನೆಯ ಪ್ರಗತಿ-ಪತ್ರಿಕೆ ಇಟ್ಟು ಮಾತನ್ನಾಡಬೇಕಿದ್ದ ಸಂಸದರು,ಅಲ್ಲಲ್ಲಿ ತಮ್ಮ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಅಡ್ಡ ದಾರಿ ಹಿಡಿದು ಮಾತನಾಡುತ್ತಿದ್ದಾರೆ.ಇದು ಮಾಡಿದ್ದುಣ್ಣೋ ಮಹಾರಾಯ ಎನ್ನುವ ಗಾದೆಯಂತಾಗಿದೆ ನಮ್ಮ ಜಿಲ್ಲೆಯ ಜನತೆಯ ಪಾಡಾಗಿದೆ.

ಹೆಗಡೆಯವರ ಬಾಯಲ್ಲಿ ಕೇವಲ ಹಿಂದು, ಮುಸ್ಲಿಂ, (Hindu, Muslim,) ಹಿಂದುತ್ವ, ದೇವಸ್ಥಾನ,‌ ಮಸೀದಿ,‌ ಈ ಪದಗಳನ್ನು ಹೊರತುಪಡಿಸಿ ಅಭಿವೃದ್ಧಿ, ಜಾತ್ಯಾತೀತತೆ, ಸಮಾನತೆ, ಆರ್ಥಿಕ ಸಮಾನತೆ, ಅಭಿವೃದ್ಧಿಗೆ ಸಂಪನ್ಮೂಲ ಕ್ರೂಡೀಕರಣ, ನಿರುದ್ಯೋಗ ನಿವಾರಣೆ ಉದ್ಯೋಗ, ಏಕತೆ, ಶಿಕ್ಷಣ ಎನ್ನುವಂತಹ ಪದಗಳು ಅಥವಾ ಮಾತುಗಳು ಎಂದೂ ಹೆಗಡೆಯವರ ಬಾಯಿಂದ ಬಂದದ್ದಿಲ್ಲ. ಇವರ ಮಾತು ಉತ್ತರ ಕುಮಾರನ ಪೌರುಷದಂತೆ ಕೇವಲ ಪಕ್ಷದ ಕಾರ್ಯಕರ್ತರ ಮುಂದೆ ಮಾತ್ರ ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ.ಸಾರ್ವಜನಿಕ ಸಭೆಗಳನ್ನು ಕರೆದು ಇಂತಹ ಮಾತನ್ನಾಡುವ ಧೈರ್ಯ ಇವರಿಗೆ ಇದ್ದಂತಿಲ್ಲ.

ಹಿಂದೆಲ್ಲಾ ಕರಾವಳಿ (Karavali) ಭಾಗದ ಕೆಲವು ಹಿಂದುತ್ವದ ಅಮಲನ್ನೇರಿಸಿಕೊಂಡ ಹಿಂದುಳಿದ ವರ್ಗದ ಒಕ್ಕಲಿಗ, ಮೀನುಗಾರ, ನಾಮಧಾರಿ, ಬಿಲ್ಲವ, ಜನಾಂಗದ ಹಾಗೂ ದಲಿತ ವರ್ಗದ ಯುವಜನತೆ ಇವರ ಹಿಂದುತ್ವದ ಕೋಮುದ್ವೇಷ ಹುಟ್ಟಿಸುವ ಬೆಂಕಿಚೆಂಡಿನ ಮಾತಿಗೆ ಮರುಳಾಗಿ ಜಿಲ್ಲೆಯಲ್ಲಿ ಗಲಾಟೆಗೆ ಆಗುವುದಂತೆ ಮಾಡಿ ಹಿಂದೂಳಿದುಳಿದವರು ಕೇಸ್(Case )ಹಾಕಿಸಿಕೊಂಡು ಸಿಗಬೇಕಾದ ಸರಕಾರಿ ಉದ್ಯೋಗವನ್ನ ಕಳೆದುಕೊಂಡು ಇಂದಿಗೂ ಅನೇಕರು ಹಿಂದೂಳಿದ ಯುವಕರಿಗೆ(Court,) ಕೋರ್ಟ್ ಕಚೇರಿ ಅಲೆಯುವ ಹೊಸ ಉದ್ಯೋಗ ಸೃಷ್ಠಿಸಿ ಕೊಂಡು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿದ್ದಾರೆ.

ಇಂತಹವರಿಗೆಲ್ಲ ನ್ಯಾಯ ಒದಗಿಸಿ ಕೊಡಬೇಕಾದ ಹೆಗಡೆಯವರು ಮೌನಕ್ಕೆ ಶರಣಾಗಿ ಅಡಗಿ ತಮ್ಮ ಮನೆಯಲ್ಲಿ ಕುಳಿತು ಕೊಂಡಿದ್ದರು ಎಂದು ಅನೇಕ ನೊಂದ ಬಿಜೆಪಿ ಕಾರ್ಯಕರ್ತರು ಇಂದಿಗೂ ಆಡಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಇಂದು ಹೆಗಡೆಯವರ ಬೆಂಕಿ ಚೆಂಡಿನ ಮಾತಿಗೆ ಬೆಂಕಿ ಹಚ್ಚುವ ಕಾರ್ಯಕರ್ತರ ಪಡೆಯೇ ಇಲ್ಲದಂತಾಗಿದೆ.ಅನಂತ್ ಕುಮಾರ್ ಹೆಗಡೆಯವರ ಈ ಬೆಂಕಿಚೆಂಡಿನ ಮಾತು ಈಗ ಠುಸ್ಸ್ ಪಟಾಕಿಯಂತಾಗಿದೆ ಅಂತಾ ಜಿಲ್ಲೆಯ ಯುವಕರೆ ಆಡಿಕೊಳ್ಳುತ್ತಿದ್ದಾರೆ..

ಯಾವೊಬ್ಬ ಬಿಜೆಪಿ( BJP)ಪದಾಧಿಕಾರಿಗಳು ಕಾರ್ಯಕರ್ತರು ಅಥವಾ ಯಾವೊಬ್ಬ ಹಿಂದುತ್ವದ ಅಮಲೇರಿಸಿಕೊಂಡ ಹಿಂದುಳಿದ ವರ್ಗದ ಯುವಕರೂ ಸಹ ಇಂದು ಅನಂತ ಕುಮಾರ್ ಹೆಗಡೆ ಯವರ ಕೋಮು ದ್ವೇಷದ ಭಾಷಣವನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಇಷ್ಟು ವರ್ಷಗಳ ಕಾಲ‌ ಅನಂತಕುಮಾರ ಹೆಗಡೆ ನಿರಂತರವಾಗಿ ಆಯ್ಕೆಯಾಗಲು ವಿರೋಧ ಪಕ್ಷಗಳು ಅನಂತಕುಮಾರ ವಿರುದ್ಧ ಬಹುಸಂಖ್ಯಾತ ಹಿಂದುಳಿದ ವರ್ಗದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಅವರ ಆಯ್ಕೆಗೆ ಕಾರಣವಾಗುತ್ತಿದೆ.ಎಂದು ಕ್ಷೇತ್ರದ‌‌ ಜನ ಆಡಿಕೊಳ್ಳುತ್ತಿದ್ದಾರೆ.. ಹೀಗಾಗಿ ಇವರಿಗೆ ಟಿಕೆಟ್ ಸಿಗುವುದೆ ಅನುಮಾ‌ವಾಗಿದೆ.