ಸುದ್ದಿಬಿಂದು ಬ್ಯೂರೋ
ಶಿರಸಿ : ಜಿಲ್ಲೆಯ ಹಿರಿಯ ನಾಯಕರು ಹಾಗೂ ರಾಜ್ಯದ ಮುತ್ಸದ್ದಿ ರಾಜಕಾರಣಿಯಾದ ಮಾಜಿ ಸಚಿವ ಆರ್ ವಿ ದೇಶಪಾಂಡೆಯವರನ್ನು(R V Deshpande) ಟೀಕಿಸುವವರು ಮೊದಲು ಜಿಲ್ಲೆಯ ವಿಸ್ತೀರ್ಣವನ್ನು ತಿಳಿಯಲಿ ಎಂದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಜಿಲ್ಲಾ ಕಾಂಗ್ರೆಸ್ ಸಂಯೋಜಕರು ಪ್ರಸನ್ನ ಶೆಟ್ಟಿ ಅವರು ಮಾಧ್ಯಮಗಳಿಗೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಆಗಬೇಕೆನ್ನುವುದು ಉತ್ತರ ಕನ್ನಡದ (uttara Kannada)ಪತ್ರಿಯೊಬ್ಬ ನಾಗರೀಕನ ಒಕ್ಕೊರಲ ಅಭಿಪ್ರಾಯ ಆದರೆ ಆಸ್ಪತ್ರೆಯ ಹೆಸರಿನಲ್ಲಿ ಜಿಲ್ಲೆಯಲ್ಲಿ ನಕಲಿ ಹೋರಾಟಗಾರರು ತಮ್ಮ ರಾಜಕೀಯ ಪ್ರಾತಿನಿದ್ಯ ಸ್ಥಾಪಿಸಿಕೊಳ್ಳಲು ನಮ್ಮ ಹಿರಿಯ ನಾಯಕರ ಬಗ್ಗೆ ಅನಾವಶ್ಯಕ ಆರೋಪಗಳನ್ನು ಮಾಡುವುದನ್ನು ಸಹಿಸಿವುದಿಲ್ಲ.

ದೇಶಪಾಂಡೆಯವರ ಅಭಿವೃದ್ಧಿ ಏನೆಂದು ಜಿಲ್ಲೆಯಲ್ಲಿನ ರಸ್ತೆಗಳು ಸೇತುವೆಗಳು ಕರಾವಳಿ ತೀರದ ಪ್ರವಾಸೋದ್ಯಮಗಳ ಅಭಿವೃದ್ಧಿಗಳನ್ನು ಮತ್ತು ಸರ್ಕಾರಿ ಸಂಸ್ಥೆಗಳನ್ನು ನೋಡಿ ತಿಳಿದುಕೊಳ್ಳಬೇಕು.ಆರ್ ವಿ ದೇಶಪಾಂಡೆಯವರು ಸಚಿವರಾದ ಸಂಧರ್ಭದಲ್ಲಿ ಜಿಲ್ಲೆಗೆ ತಂದ ಅನುದಾನ ಹಾಗೂ ನಡೆದ ಅಭಿವೃದ್ಧಿ ಕಾರ್ಯಗಳು ಮತ್ತು ಅವರ ಆಡಳಿತ ವೈಖರಿ ಇತಿಹಾಸದ ಪುಟಗಳಲ್ಲಿವೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಬೀಚ್ ವಾಟರ್ ಸ್ಪೋರ್ಟ್ಸ್,ನೇತ್ರಾಣಿ ಸ್ಕೋಬಾ ಡೈವಿಂಗ್ (Netrani Scoba Diving) ಕಯಾಕಿಂಗ್, ಕಾಳಿ ನದಿ ಜಲ ಸಾಹಸ ಕ್ರೀಡೆಗಳು, ಜಂಗಲ್ ರೆಸಾರ್ಟ್ ಗಳು, ರಾಕ್ ಗಾರ್ಡನ್ ನಿರ್ಮಾಣ, ಸಾಲು ಮರದ ತಿಮ್ಮಕ್ಕ ವನ, ಫುಡ್ ಕೋರ್ಟ್, ಕಾಳಿ ರಿವರ್ ಗಾರ್ಡನ್, ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್ ನೇಮಕ,ಟಪೋಲೋ ಯುದ್ಧ ವಿಮಾನ, ವಾರ್ಷಿಪ್ ಮ್ಯೂಸಿಯಂ, ಪ್ರವಾಸಿಗರಿಗೆ ಜಿಲ್ಲೆಯಲ್ಲೇ ತಯಾರಾದ ವಸ್ತುಗಳ ತಿಳುವಳಿಕೆ ಮತ್ತು ಮಾರಾಟಕ್ಕೆ ನೆಲಸಿರಿ ಯೋಜನೆ ಹೀಗೆ ಪ್ರವಾಸೋದ್ಯಮ(Tourism) ಅಭಿವೃದ್ಧಿ ಯಾದರೆ ಜಿಲ್ಲೆಯ ಪ್ರತಿ ತಾಲೂಕಿನ ಅರೋಗ್ಯ ಕೇಂದ್ರಗಳನ್ನ ಮೇಲ್ದರ್ಜೆಗೆರಿಸದ್ದು ದೇಶಪಾಂಡೆಯವರ ಕಾಲಘಟ್ಟದಲ್ಲೇ.
ದೇಶಪಾಂಡೆಯವರ ಅಭಿವೃದ್ಧಿಯ ಟೀಕಿಸುವವರು ಆಬಹಿರಂಗ ಚರ್ಚೆಗೆ ಬರಲಿ.

ನಮ್ಮ ನಾಯಕರನ್ನು ಟೀಕಿಸುವವರು ಕಳೆದ ಕೆಲ ದಿನಗಳ ಹಿಂದೆ ಮೋದಿಯವರೇ ಪುನಃ ಪ್ರಧಾನಿಯಾಗಲಿ ಎಂದು ಯಾಗವನ್ನು ಮಾಡಿದ್ದರು, ಅದೇ ಮೋದಿಯವರ ಸಂಪುಟದ ಮಾಜಿ ಸಚಿವರು ಹಾಗೂ ನಮ್ಮ ಜಿಲ್ಲೆಯಿಂದ ಆರು ಬಾರಿ ಆಯ್ಕೆಯಾಗಿ ಕಾಣೆಯಾದ ಸಂಸದರ ಅಭಿವೃದ್ಧಿ ಮತ್ತು ಕೇಂದ್ರದಿಂದ ತಂದಂತಹ ಅನುದಾನದ ವಿವರವನ್ನು ಬಹಿರಂಗ ಚರ್ಚೆಗೆ ತರಲಿ.
ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜು ಕೂಡ ದೇಶಪಾಂಡೆಯವರ ಅಧಿಕಾರ ಅವಧಿಯಲ್ಲೆ ಮಂಜೂರಾಗಿದ್ದು ಎನ್ನುವುದನ್ನ ಅರ್ಥೈಸಿಕೊಳ್ಳಬೇಕು. ಆದ್ದರಿಂದ ಪತ್ರಿಕಾ ಹೇಳಿಕೆ ಕೊಡುವವರು ಮೊದಲು ಜಿಲ್ಲೆಯ ಆಳ-ಅಗಲವನ್ನು ಅರಿಯಲಿ ದೇಶಪಾಂಡೆಯವರು ಬೃಹತ್ ಕೈಗಾರಿಕೆಗಳ(Big Industry) ಸಚಿವರಾಗಿದ್ದ ಸಂದರ್ಭದಲ್ಲಿ ಖಾಸಗಿ ಸಹಯೋಗದಲ್ಲಿ ಜಿಲ್ಲೆಗೆ ತಂದಂತಹ ಎರಡು ಕೈಗಾರಿಕೆಗಳು ಯಾವ ಕಾರಣಕ್ಕೆ ವಾಪಸ್ ಆಗಿವೆ ಎಂಬುದನ್ನು ಅರಿತು ಮಾತನಾಡಲಿ.

ನಮ್ಮ ನಾಯಕರನ್ನು ಟೀಕಿಸುವವರು ಕನಿಷ್ಠ ಪಕ್ಷ ಪತ್ರಿಕೆಗಳ ಮುಂದೆ ಅವರ ಹೆಸರನ್ನು ಹೇಳಿ ಟೀಕಿಸುವಷ್ಟು ನೈತಿಕತೆ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲಿ.ಕೇವಲ ತಮ್ಮ ರಾಜಕೀಯ ಒತ್ತಾಸೆಗೆ ಜಿಲ್ಲೆಯಲ್ಲಿ ತಮ್ಮ ಹೆಸರು ಪತ್ರಿಕೆಗಳಲ್ಲಿ ಸದ್ದು ಮಾಡಬೇಕೆಂಬ ಕಾರಣಕ್ಕೆ ಅಭಿವೃದ್ಧಿಯ ಹರಿಕಾರು ಜಿಲ್ಲೆಯ ಜನಾನೂರಾಗಿ ನಾಯಕರಾದ ಆರ್ ವಿ ದೇಶಪಾಂಡೆಯವರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ.ರಾಜ್ಯದ ಜನತೆ ಕಾಂಗ್ರೆಸ್(Congress) ಪಕ್ಷಕ್ಕೆ ಆಶೀರ್ವಾದ ಮಾಡಿ 5 ವರ್ಷಗಳ ಸುಭದ್ರ ಸರ್ಕಾರವನ್ನು ನಡೆಸಲು ಅನುಮತಿ ನೀಡಿದ್ದಾರೆ,

ಜನಗಳ ಆಶೀರ್ವಾದದಂತೆ ಉತ್ತಮ ಆಡಳಿತ ನೀಡಿ ಅಭಿವೃದ್ಧಿಪರ ಸಾಗುವಂತೇ ಆಡಳಿತ ವ್ಯವಸ್ತೆಯನ್ನು ನೋಡಿಕೊಂಡು ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗಳ ನಿರ್ದೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ನಮ್ಮ ನಾಯಕರಾದ ಆರ್ ವಿ ದೇಶಪಾಂಡೆಯವರ ಮುಂದಾಳತ್ವದಲ್ಲೇ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಡಿಪಾಯ ಹಾಕಲಿದ್ದಿವೆ.ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ (Lok Sabha Elections)ಜಿಲ್ಲೆಯ ಜನಗಳ ಜೀವ ರಕ್ಷಕ ಆಸ್ಪತ್ರೆಯ ವಿಷಯವನ್ನು ರಾಜಕೀಯಗೊಳಿಸಿ ಜಿಲ್ಲೆಯಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಹೋರಾಡುತ್ತಿರುವವರ ಬಗ್ಗೆ ಉತ್ತರ ಕನ್ನಡದ ಪ್ರಜ್ಞವಂತ ಜನತೆ ಯೋಚಿಸುತ್ತಾರೆ.

ಜಿಲ್ಲೆಯ ಸಮಗ್ರ ಚಿತ್ರಣವೇ ತಿಳಿಯದ ಉದ್ಯಮಿಗಳು ರಾಜಕೀಯ ಪ್ರವೇಶಕ್ಕೆ ಕುಚೇಷ್ಟೆಗಳ ಮಾತನಾಡುವುದನ್ನು ನಿಲ್ಲಿಸಬೇಕೆಂದು ಪ್ರಸನ್ನ ಶೆಟ್ಟಿ ತಮ್ಮ ಹೇಳಿಕೆ ಮೂಲಕ ತಿಳಿಸಿದ್ದಾರೆ.