MP Anantakumar Hegde
suddibindu.in
Mundagoda: ಮುಂಡಗೋಡ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ.ಭಗವಂತ ಅವಕಾಶ ಕೊಟ್ಟಿದ್ದರಿಂದ ಅಲ್ಪಸ್ವಲ್ಪ ಕೆಲಸ ಮಾಡಿದ್ದೇನೆ.ಕಳೆದ ಎರಡು ಚುನಾವಣೆಯಲ್ಲೇ ನನ್ನನ್ನು ಬಿಟ್ಟುಬಿಡಿ ಎಂದಿದ್ದೆ.ಆದರೆ ಸಂಘಟನೆಯವರು ಬಿಡುತ್ತಿಲ್ಲವೆಂದು ಸಂಸದ ಅನಂತಕುಮಾರ ಹೆಗಡೆ ತಾನು ಪಕ್ಷಕ್ಕೆ ಅನಿವಾರ್ಯ ಎನ್ನುವಂತೆ ಹೇಳಿಕೊಂಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ (uttar kannada) ಮುಂಡಗೋಡಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ ರಾಜಕಾರಣ ಬೇಡ ಎಂದು ಗಟ್ಟಿ ಮನಸ್ಸು ಮಾಡಿ ಕುಳಿತಿದ್ದೆ ಅದೇನೋ ಗೊತ್ತಿಲ್ಲ ವಾಪಾಸ್ ಯೂ ಟರ್ನ್ ಮಾಡಿ ಬರುತಿದ್ದೇನೆ ಎಂದರು.
ಸರಕಾರ ದಿವಾಳಿಯಾಗಿದೆ.
ಸಿದ್ದರಾಮುಲ್ಲ ಖಾನ್ ಬಳಿ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ..ಅಭಿವೃದ್ಧಿ ಗೆ, ಶಾಸಕರಿಗೆ ಕೊಡಲು ಪಗಾರ ಇಲ್ಲ ಅಂತಾರೆ..ಹಿಂದುಳಿದವರಿಗೆ ಹಾಗೂ ಎಸ್ಸಿ- ಎಸ್ಟಿಗಳಿಗೆ ನೀಡಿದ 11ಸಾವಿರ ಕೋಟಿ ರೂ. ನಾಪತ್ತೆಯಾಗಿ ಬಿಟ್ಟಿದೆ.ರಾಜ್ಯ ಸರ್ಕಾರ ದಿವಾಳಿಯಾಗಿ ಬಿಟ್ಟಿದ್ದು, ಸಿದ್ಧರಾಮಯ್ಯನ(Siddaramaiah) ಸರ್ಕಾರದ ತರ(Modi) ಮೋದಿ ಸರ್ಕಾರ ದಿವಾಳಿ ಆಗಿಲ್ಲ. ರಾಜ್ಯವನ್ನು ಲೂಡಿ ಹೊಡೆದು ದಿವಾಳಿ ಮಾಡಿ ಓಟು ಪಡೆಯಲು ಹೊರಟಿದ್ದಾರೆ.ನಮಗೆ ಕೇಂದ್ರ ಸರ್ಕಾರ ಟ್ಯಾಕ್ಸ್ (Central Government Tax,) ಹಣ ಕೊಟ್ಟಿಲ್ಲ ಅಂತಾರೇ.ತಮಿಳುನಾಡಿಗೆ(Tamil Nadu) ಇಲ್ಲದ ವೇದನೆ, ಆಂಧ್ರದವರಿಗೆ ಇಲ್ಲದ ವೇದನೆ, ಕೇರಳಕ್ಕೆ ಇರದ ವೇದನೆ ಇವರಿಗೇಕೆ? ಅವರು ಕೇಳಬಹುದಿತ್ತಲ್ಲ..? ಅನ್ಯಾಯ ಮಾಡಿದ್ರೆ ಅವರಿಗೂ ಬಿಜೆಪಿಯವರಲ್ಲ ಎಂದು ಮೋದಿಯವರು ಅವರಿಗೂ ಹಣ ಕೊಡದೇ ಕಳುಹಿಸಬಹುದಿತ್ತು. ಅವರಿಗ್ಯಾಕೆ ಎಲ್ಲಾ ಸರಿಯಾಗುತ್ತಿದೆ, ನಮ್ಮ ಸಿದ್ದರಾಮುಲ್ಲಾ ಖಾನ್ ಗೆ ಏಕೆ ಈ ತೊಂದರೆ..
ಹಿಂದುಗಳ ಸಮಾಜ ಬೇವರ್ಸಿ ಸಮಾಜವೇ ?
ಈ ದೇಶದಲ್ಲಿ ತೆರಿಗೆ ಕಟ್ಟುವವರು 99.9 ಶೇ. ಜನರು ಹಿಂದುಗಳು.ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಮಸೀದಿಗೆ, ಚರ್ಚಿಗೆ ಯಾಕೆ ಕೊಟ್ರಿ.ನಾವು ಕೇಳಬೇಕಾ ಬೇಡವಾ.ನಮ್ಮ ತೆರಿಗೆ ಹಣ ನಮಗೆ ಕೊಡಿ.ನಮ್ಮ ದೇವಸ್ಥಾನಗಳು ಹಾಳು ಬಿದ್ದಿವೆ, ಅದಕ್ಕೆ ನೀಡಲು ರಾಜ್ಯ ಸರಕಾರದಲ್ಲಿ ದುಡ್ಡಿಲ್ಲ.ಆದರೆ,ಮಸೀದಿಗೆ ಕೊಡಲು ಸರಕಾರಲ್ಲಿ ದುಡ್ಡಿದೆ. ಮಸೀದಿಗೆ ಹಣ ಕೊಡ್ತೀರಾ, ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ದುಡ್ಡು ಕೊಡ್ತೀರಾ.ನಮ್ಮ ದೇವರು ಏನು ಅಪರಾದ ಮಾಡಿದ್ದಾನೆ..?ನಮ್ಮ ಹಿಂದುಗಳು ಕೊಟ್ಟಿರುವ ಟ್ಯಾಕ್ಸ್ ಹಣವಿದು.ನಾವು ಕೊಟ್ಟಿರೋ ತೆರಿಗೆ ಮೇಲೆ ಸರ್ಕಾರ ನಡೀತಿದೆ.ನಾವು ಹಿಂದುಗಳ ತೆರಿಗೆ ಹಿಂದುಗಳ ಹಕ್ಕು ಅಂತ ಕುಳಿತುಕೊಂಡರೇ ಪರಿಸ್ಥಿತಿ ಏನಾಗುತ್ತೆ?
ನಾವು ಸಣ್ಣ ಬುದ್ಧಿ ಮಾಡುವುದಿಲ್ಲ.ಹಿಂದುಗಳ ಸಮಾಜ ಬೇವರ್ಸಿ ಸಮಾಜವೇ ? ಯಾರೂ ಹೇಳೋರು ಕೇಳೋರು ಇಲ್ಲದ ಸಮಾಜವಾ ಇದು.ದಯವಿಟ್ಟು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.ಕಾಂಗ್ರೆಸ್(Congress)ಮಾಡಿದ್ದು ಅಪಪ್ರಚಾರ ಮಾತ್ರ.ಪ್ರಚಾರ ಯಾವತ್ತೂ ಕಾಂಗ್ರೆಸ್ ಮಾಡಿಲ್ಲ. ಸ್ವಾತಂತ್ರ ಬಂದ ನಂತರ ಎಲ್ಲಾ ರಸ್ತೆಗಳು, ಸರ್ಕಲ್, ಯೋಜನೆಗಳಲ್ಲಿ ಗಾಂಧಿ ಹೆಸರುಗಳೇ ಇಡಲಾಗತ್ತಿದೆ.ಅಪ್ಪ ಗಾಂಧಿ, ಮಗ ಗಾಂಧಿ,ಅಜ್ಜ ಗಾಂಧಿ, ಮೊಮ್ಮಗ ಗಾಂಧಿ ಎಲ್ಲಾ ಗಾಂಧಿ ಹೆಸರುಗಳೇ.ಮೋದಿಯವರು ಎಲ್ಲಿಯಾದರೂ ಒಂದು ಹೆಸರು ಇಟ್ಟುಕೊಂಡಿದ್ದಾರಾ.. ನಮಗೆ ಕೆಲಸ ಮಾಡುವುದು ಮಾತ್ರ ಬೇಕು ,ಅವರಿಗೆ ಹೆಸರು ಮಾತ್ರ ಬೇಕು.
ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ
ಪಂಜಾಬ್ ಬಾರ್ಡರ್‌ನಲ್ಲಿ (Punjab Border) ರೈತರ ಹೆಸರಿನಲ್ಲಿ ಖಲಿಸ್ತಾನಿಗಳು ಗಲಾಟೆ ಮಾಡ್ತಿದ್ದಾರೆ.ಇಡೀ ದೇಶದಲ್ಲಿ ಇಲ್ದಿರೋ ಗಲಾಟೆ, ಅನ್ಯಾಯ ಅವರಿಗೇನಾಗಿದೆ…? ಅವರು ದೊಡ್ಡ ದೊಡ್ಡ ವಾಹನಗಳನ್ನು ತೆಗೆದುಕೊಂಡು ಬರ್ತಿದ್ದಾರೆ, ರೈತರಲ್ಲಿ ಅಷ್ಟೊಂದು ದುಡ್ಡು ಇದ್ಯಾ..? ಪ್ರತೀ ವರ್ಷ ರೈತರ ಸಾಲ ದೊಡ್ಡದಾಗ್ತಾನೇ ಇದೆ, ದೊಡ್ಡ ಕೆರೆ ತೆಗೆದ್ರಿ ಸಣ್ಣ ಕೆರೆ ತುಂಬಿದ್ರಿ ಆದರೆ, ಪಂಜಾಬ್ ಬಾರ್ಡರ್‌ನಲ್ಲಿ ಪ್ರತಿಭಟನೆಗೆ ಬರುವವರು ದೊಡ್ಡ ದೊಡ್ಡ ವಾಹನಗಳನ್ನು ತೆಗೆದುಕೊಂಡು ಬರ್ತಿದ್ದಾರೆ.
ಇದು ರೈತರ ಹೋರಾಟವಲ್ಲ, ದೇಶ ದ್ರೋಹಿಗಳ ಹೋರಾಟ, ಖಲಿಸ್ತಾನಿಗಳ ಹೋರಾಟ.ಅವರು ಯಾರೂ ಕೂಡಾ ರೈತರಲ್ಲ, ಅದಕ್ಕೆ ಬೇರೆ ದೇಶದವರು ಹಣ ಕೊಡ್ತಿದ್ದಾರೆ. ಮೋದಿಯವರ ಕೆಲಸದಿಂದ ಎಷ್ಟು ದೇಶಗಳು ಅವರನ್ನು ಕೊಂಡಾಡಿದ್ರೂ ಅಷ್ಟೇ ಹೊಟ್ಟೆ ಕಿಚ್ಚು ಪಡುವವರೂ ಇದ್ದಾರೆ.ಇದಕ್ಕೆಲ್ಲಾ ಮುಕ್ತಿ ಬೇಕಂತಾದ್ರೆ ದೇಶದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕು ಎಂದ ಅನಂತ ಕುಮಾರ್ ಹೆಗಡೆ