ಸುದ್ದಿಬಿಂದು ಬ್ಯೂರೋ
ಕುಮಟಾ : ಸಂಸದರಾದ ಅನಂತ ಕುಮಾರ್ ಹೆಗಡೆ ತಾನೊಬ್ಬ ಜನಪ್ರತಿನಿಧಿ ಅನ್ನುವುದನ್ನು ತಲೆಯಲ್ಲಿಟ್ಟುಕೊಂಡು ನಿಗಾವಹಿಸಿ ಮಾತನಾಡುವುದನ್ನು ಮೊದಲು ಕಲಿಯಲಿ. ಬೇಕಾಬಿಟ್ಟಿ ಹೇಳಿಕೆ ನೀಡಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಇವರನ್ನು ಬೇರೆ ರೀತಿಯಲ್ಲಿ ತಿಳಿದುಕೊಳ್ಳಬಹುದೆಂದು ಉತ್ತರಕನ್ನಡ ಕೆಪಿಸಿಸಿ ಸಂಯೋಜಕ ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದಾರೆ.
ಅನಂತಕುಮಾರ್ ಹೆಗಡೆ 25ವರ್ಷದಿಂದ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಮೊಟ್ಟ ಮೊದಲಿನಿಂದಾಗಿ ಜಿಲ್ಲೆಯ ಜನತೆಗೆ 25ವರ್ಷದಲ್ಲಿ ತಾವು ತಂದಿರುವ ಯೋಜನೆ ಹಾಗೂ ಅನುಷ್ಠಾನವಾದ ಬಗ್ಗೆ ಮಾತನಾಡುವುದನ್ನು ಕಲಿಯಬೇಕು, ಅದನ್ನ ಬಿಟ್ಟು ಬೇಕಾಬಿಟ್ಟಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ 25ವರ್ಷದಲ್ಲಿ ಜಿಲ್ಲೆಗೆ ಶೂನ್ಯ ಸಾಧನೆ ನೀಡಿ ಇತಿಹಾಸ ಸೃಷ್ಟಿಸಿರುವ ಏಕೈಕ ಸಂಸದರು ನಮ್ಮ ಜಿಲ್ಲೆಯ ಸಂಸದರು ಕೇಂದ್ರ ಮಟ್ಟದಲ್ಲಿ ಒಮ್ಮೆಯೂ ಜಿಲ್ಲೆಯ ಸಮಸ್ಯೆ ಬಗ್ಗೆ ಧ್ವನಿ ಎತ್ತದೆ ಸದಾ ನಿದ್ರೆಯ ಮೂಡಿನಲ್ಲಿ ಇರುತ್ತಿರುವ ಇವರು ತಮ್ಮ ಕೇಂದ್ರ ನಾಯಕರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಭಾವನಾತ್ಮಕ ಹೇಳಿಕೆಗಳನ್ನ ನೀಡುವ ಮುಖಾಂತರ ಮತಗಳನ್ನು ತೆಗೆದುಕೊಳ್ಳಬಹುದು ಎನ್ನುವ ಭರದಲ್ಲಿ ರಾಷ್ಟ್ರಮಟ್ಟದ ನಾಯಕರ ಬಗ್ಗೆ ಗಮನವಿಲ್ಲದೆ ಮಾತನಾಡುವುದು ಇವರ ಚಾಳಿಯಾಗಿದೆ.
ಜಿಲ್ಲೆಯ ಜನತೆ ಸಂಸದರ ವಿರುದ್ದ ಮುಂದಿನ ದಿನಗಳಲ್ಲಿ ದಂಗೆ ಎಳುವ ಸಂದರ್ಭವು ಬಂದರೆ ಆಶ್ಚರ್ಯವಿಲ್ಲ ಜಿಲ್ಲೆಗೆ ಜಿಲ್ಲೆಯ ಸಮಸ್ಯೆ ಬಗ್ಗೆ ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡದೆ ಮೂಖರಂತೆ ಕುಳಿತು ಎದ್ದು ಬರುವ ಸಂಸದರು ಜಿಲ್ಲೆಯಲ್ಲಿ ಮಾತ್ರ ತಮಗೆ ತಾವೇ ಹುಲಿ ಎಂದುಕೊಂಡು ತಿರುಗಾಡುತ್ತಿರುತ್ತಾರೆ.
ನಿಮ್ಮ ಆರ್ಭಟವನ್ನು ಒಮ್ಮೆಯಾದರೂ ಲೋಕಸಭೆಯ ಅಧಿವೇಶನದಲ್ಲಿ ತೋರಿಸಿದ ದಾಖಲೆ ನೀಡಿ. ಜಿಲ್ಲೆಯ ಮುಗ್ದ ಜನರನ್ನ ಭಾವನಾತ್ಮಕ ಮಾತುಗಳಿಂದ ಮರಳು ಮಾಡಿ ಮತ ಪಡೆದುಕೊಳ್ಳುವಿರಿ ಎಂಬುದು ನಿಮ್ಮ ಭ್ರಮೆ ನಿಮಗೆ ಜಿಲ್ಲೆಯ ಜನರ ಮತ ಕೇಳುವ ಅರ್ಹತೆ ಕೂಡ ಇಲ್ಲ ಸ್ವತಃ ಬಿಜೆಪಿ ಅವರೇ ನಿಮ್ಮನ್ನ ವಿರೋಧಿಸುತ್ತಿದ್ದಾರೆ ನಿಮ್ಮ ಹೇಳಿಕೆಗಳಿಂದ ಮುಜುಗರವಾಗುತ್ತಿದೆ ಒಮ್ಮೆಯೂ ಜಿಲ್ಲೆಯ ಜನತೆಗೆ ಸ್ಪಂದಿಸದ ನಿಮಗೆ ಜಿಲ್ಲೆಯ ಜನರು ತಮಗೆ ಶಾಪವಾಗುತ್ತಿರುವುದು ತಿಳಿದಿದೆ ದಯವಿಟ್ಟು ಇನ್ನಾದರೂ ತಾವೊಬ್ಬ ಜನಪ್ರತಿನಿಧಿ ಸಾರ್ವಜನಿಕರು ಜಿಲ್ಲೆಯ ಜನರ ಎದುರಲ್ಲಿ ಮಾತನಾಡುವಾಗ ಯಾವ ರೀತಿ ಮಾತನಾಡಬೇಕು ಎನ್ನುವುದನ್ನು ಕಲಿತುಕೊಳ್ಳಿ ಇಲ್ಲವಾದಲ್ಲಿ ಮುಂದಿನ ದಿನ ನೀವು ಬಂದಲ್ಲೆಲ್ಲ ಜನರಿಂದಲೇ ಧಿಕ್ಕಾರವಾದಿತು ಎಂದು ಭಾಸ್ಕರ ಪಟಗಾರ ಎಚ್ಚರಿಕೆ ನೀಡಿದ್ದಾರೆ.