ಸುದ್ದಿಬಿಂದು ಬ್ಯೂರೋ

ಶಿರಸಿ: ರಾಜ್ಯದ ಮುಖ್ಯಮಂತ್ರಿಗಳಿಗೆ ಏಕ ವಚನದಲ್ಲಿ ಮಾತನಾಡುವುದು ಮತ್ತು ಮಸೀದಿಗಳನ್ನು ಕೆಡವುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಿರುವ ಅನಂತ್ ಕುಮಾರ ಹೆಗಡೆ ವಿರುದ್ಧ ಪೊಲೀಸ್ ಇಲಾಖೆ ಸುಮೊಟೊ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಿರಸಿ ತಾಲೂಕಾ ಯುವ ಮುಖಂಡ ಪ್ರಸನ್ನ ನಾಯ್ಕ್ ಒತ್ತಾಯಿಸಿದ್ದಾರೆ.

ಅನಂತಕುಮಾರ ಹೆಗಡೆ ಅವರೇ ನೀವು ರಾಜಕೀಯದಲ್ಲಿ ಮಾಡಿದ ಸಾಧನೆಯನ್ನು ತಿಳಿಸಿ ಜನರ ಮುಂದೆ ಬನ್ನಿ, ನಿಮ್ಮ ಸಾಧನೆ ಶೂನ್ಯವಾದಗ ಇಂತಹ ಬುರುಡೆ ಹೇಳಿಕೆಗಳು ಸಹಜ.ನೀವು ಈದ್ಗ ಮೈದಾನದ ಗಲಭೆಯಿಂದ ಹಿಡಿದು 6ಬಾರಿ ಸಂಸದನಾಗುವ ತನಕ ಬೇರೆಯವರು ಮಾಡಿದ ಕೆಲಸಗಳ ಲಾಭದಾರಿಯೆ ವಿನಃ ನಿಮ್ಮ ಸ್ವಂತ ಶ್ರಮವಿಲ್ಲ

ಈ ಬಾರಿ ಜಿಲ್ಲೆಗೆ ಹಿಡಿದ ಗ್ರಹಣ ಖಂಡಿತವಾಗಿಯೂ ಬಿಡುತ್ತದೆ, ಒಂದೇ ಬಾರಿಗೆ ನಿಮ್ಮ ಬತ್ತಳಿಕೆಯ ಎಲ್ಲಾ ಅಸ್ತ್ರಗಳನ್ನು ಕಾಲಿ ಮಾಡಿಕೊಳ್ಳಬೇಡಿ, ಇನ್ನು ಸಮಯವಿದೆ.ಟಿಕೆಟ್ ಸಿಗುವುದಿಲ್ಲ ಎಂಬ ಹತಾಶೇಯಿಂದ ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿರುವ ಸಂಸದರನ್ನ ಆಸ್ಪತ್ರೆಗೆ ಸೇರಿಸಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕಾಗಿರುವುದರಿಂದ ಧಾರವಾಡ ಆಸ್ಪತ್ರೆಗೆ ದಾಖಲಿಸಬೇಕೆಂದು ಲಿಖಿತ ಹೇಳಿಕೆಯಲ್ಲಿ ‌ತಿಳಿಸಿದ್ದಾರೆ

.