suddibindu. in
ಕಾರವಾರ : ರೇಷನ್ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ ಮಾಡಲು ಸರ್ವರ್(Server)ಕಾಟದಿಂದಾಗಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿನ ಅದೆಷ್ಟೋ ಕುಟುಂಬಗಳು ಕಳೆದ ಕೆಲ‌ ವರ್ಷಗಳಿಂದ ಹೆಸರು ಸೇರ್ಪಡೆ ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ.

ರಾಜ್ಯದಲ್ಲಿನ ಅನೇಕ ಕುಟುಂಬಗಳು ಕಳೆದ ಅನೇಕ‌ ವರ್ಷಗಳಿಂದ ತಮ್ಮ ಮಕ್ಕಳ,ಹೆಸರು ಸೇರ್ಪಡೆ ಮಾಡಲಾಗದೆ‌. ಸಮಸ್ಯೆ ಎದರಿಸುವಂತಾಗಿದೆ. ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗುತ್ತದೆ. ಆದರೆ ಅದು ಕೇವಲ ಒಂದು ಗಂಟೆ, ಅರ್ಧಗಂಟೆಗೆ ಮಾತ್ರ ಸಿಮೀತವಾಗಿರುತ್ತದೆ. ಇದನ್ನೇ ನಿರಂತರವಾಗಿ ಅವಕಾಶ ನೀಡಿದರೆ ಅನೇಕ‌ ಕುಟುಂಬದ ಸದಸ್ಯರು.ತಮ್ಮ‌ ಪತ್ನಿ,ಮಕ್ಕಳ,,ಹೆಸರನ್ನ ಸೇರ್ಪಡೆ ಮಾಡಬಹುದಾಗಿತ್ತು. ಪದೆ ಪದೆ ಸರ್ವರ್ ಸಮಸ್ಯೆಯಿಂದ ಸೇರ್ಪಡೆ ಮಾಡಲಾಗದೆ ಸಮಸ್ಯೆಯಲ್ಲೆ ಕಾಲ ಕಳೆಯಬೇಕಾಗಿದೆ.

ಎಪಿಎಲ್ ಕಾರ್ಡ್ (APL Card,BPL Card) ಮತ್ತು ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ (Antyodaya Card) ಪಡೆದುಕೊಳ್ಳಲು ಜನ ಸಾಕಷ್ಟು,ಪ್ರತಿಬಾರಿ ಸಹ ರೇಷನ್ ಕಾರ್ಡ್ ತಿದ್ದುಪಡೆಗೆ ಅವಾಶ ನೀಡಲಾಗುತ್ತಿದೆ ಎಂದು ಸರಕಾರ ಹೇಳುತ್ತಲೆ ಬರುತ್ತದೆ. ಆದರೆ ಪದೆ ಪದೆ ಸರ್ವರ್ ಸಮಸ್ಯೆ ಉಂಟಾಗುತ್ತಲೆ ಇದೆ. ಇದರೊಂದಾಗಿ ಸೇರ್ಪಡೆ ಮಾಡಲು ಕಾದು ಕಾದು ಅದೆಷ್ಟೋ ಜನ ವರ್ಷಗಳಿಂದ ಕಾಯುವಂತಾಗಿದೆ. ತಿದ್ದುಪಡಿ ಮಾಡಲು ಅವಕಾಶ ಎಂದು ಹೇಳಿ ಸರ್ವರ್ ಸಮಸ್ಯೆ ಉಂಟಾಗತ್ತಾ ಇರುವ ಕಾರಣ ಹೆಸರು ಸೇರ್ಪಡೆಗೆ ಅಲೆದಾಡಿ ಸುಸ್ತಾಗಿ ಅನೇಕರು ಹೆಸರು ಸೇರ್ಪಡೆ ಮಾಡಿಸಿಕೊಳ್ಳುವುದನ್ನೆ ಕೈ ಬಿಟ್ಟು ಕುಳಿತ್ತಿದ್ದಾರೆ.

ಈ ಬಗ್ಗೆ ಕಂದಾಯ ಸಚಿವರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತಿಂಗಳಲ್ಲಿ ಪೂರ್ತಿಯಾಗಿ ಅವಕಾಶ ನೀಡುವಂತಾಗಬೇಕು. ಸರಕಾರ ಇದನ್ನ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದು ಈ ಹಿಂದಿನ ಸರಕಾರದಿಂದಲ್ಲೂ ಕೂಡ ಇದೆ ಸಮಸ್ಯೆ ಉಂಟಾಗುತ್ತಲೆ ಇದೆ‌. ಇನ್ನಾದ್ದರೂ ಕಂದಾಯ ಸಚಿವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ.