suddibindu.in
ಸಿದ್ದಾಪುರ: ಬಿಜೆಪಿಯವರು ಇದುವರೆ ಸುಳ್ಳು ಹೇಳುವುದರ ಮೂಲಕವೆ ಜನರಿಗೆ ಚಂದ್ರನ ಕಾಣಿಸುವ ಕೆಲಸ ಮಾಡಿದ್ದಾರೆ.ಎಂದು ಅವರು ನುಡಿದಂತೆ ನಡೆದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ (Congress leaders) ಬಿ ಕೆ ಹರಿಪ್ರಸಾದ್ (BK Hariprasad)ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದ ಈಶ್ವರಿ ದೇವಾಲಯ ವಾರ್ಷಿಕೋತ್ಸವ ಮತ್ತು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ರಾಮ‌ ಕ್ಷೇತ್ರ ಮಹಾಸಂಸ್ಥಾನದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತ್ನಾಡಿದರು.

ಇದನ್ನೂ ಓದಿ

ಹತ್ತು ವರ್ಷ ಆದರೂ ಕೂಡ ಮೋದಿ ಸರಕಾರ(Modi government) ಸುಳ್ಳು ಹೇಳುವುದರಲ್ಲೆ ಇದ್ದಾರೆ.ಇವರು ಸತ್ತ ಹೇಳೋದಕ್ಕೆ ಯಾವಾಗ ಕಲಿಯಲಿದ್ದಾರೆ ಎನ್ನುವುದು ಬಹಳ ಮುಖ್ಯ.2014ರಲ್ಲಿ ವಿದೇಶದಲ್ಲಿರುವ ಎಲ್ಲಾ ಕಪ್ಪು ಹಣವನ್ನ ತಂದು ಪ್ರತಿಯೊಬ್ಬರ ಖಾತೆಗೆ ಹಾಕುವುದಾಗಿ ಹೇಳಿದ್ದರು, ಎಷ್ಟು ಹಣ ತಂದ್ದರು ಯಾರ‌ಯಾರ ಖಾತೆ ಹಣ ಬಂದಿದೆ ಅಂತಾ ಗೊತ್ತಾಗಿಲ್ಲ. ಸುಳ್ಳು ಹೇಳುವುದರಲ್ಲೆ ಇವರು ಕಾಲ ಕಳೆಯುತ್ತಿದ್ದಾರೆ ವಿನಃ ಅಭಿವೃದ್ಧಿ ಎನ್ನುವುದು ಆಗಿಲ್ಲ.

ಇನ್ನೂ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ಈ ಭಾರಿ ಕರ್ನಾಟಕದಲ್ಲಿ ನಮ್ಮ‌ ಕಾಂಗ್ರೇಸ್ ಪಕ್ಷ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ‌ ಕೆ ಶಿವಕುಮಾರ ಅವರ ನೇತೃತ್ವದಲ್ಲಿ 28ಕ್ಕೆ 28ಸ್ಥಾನವನ್ನ ಗೆಲ್ಲುತ್ತೇವೆಯೆಂದು ಹರಿಪ್ರಸಾದ್ ವಿಶ್ವಾಸದ ಮಾತುಗಳನ್ನಾಡಿದ್ದರು.