suddibindu.in
KUMTA,ಕುಮಟಾ : ನಿರ್ಮಾಣ ಹಂತದ ಸೇತುವೆಯ ಸ್ಲ್ಯಾಬ್ ಕುಸಿದು ಬಿದ್ದು ಹಿಟಾಚಿ(Hitachi,) ಕ್ರೇನ್ ಜಖಂಗೊಂಡು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆಗೆ ಸಂಬಂಧಿಸಿದಂತೆ ಕಳಪೆ‌ ಕಾಮಗಾರಿ‌ ಮಾಡಿರುವ ಕಂಪನಿ ಹಾಗೂ ಅದಕ್ಕೆ ಶಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ
.

ಕುಮಟಾದ ತಾರೀಬಾಗಿಲಿನಲ್ಲಿ ಅಘನಾಶಿ ನದಿಗೆ ಅಡ್ಡಲಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕುಂದಾಪುರದ ಸೈಂಟ್ ಅಂಟೋನಿ ಕನ್ಸ್ಟಕ್ಷನ್ ಈ ಕಾಮಗಾರಿಯನ್ನ ಗುತ್ತಿಗೆ ಪಡೆದುಕೊಂಡಿದೆ. ಆದರೆ ಈ ಕಂಪನಿ‌ ಬಳಿ ಯಾವುದೇ ಸರಿಯಾದ ಯಂತ್ರೋಪಕರಣವಿಲ್ಲ, ಆದರೂ ಸಂಬಂಧಿಸಿದ ಅಧಿಕಾರಿಗಳು ಈ ಕಾಮಗಾರಿಯನ್ನ ಗುತ್ತಿಗೆ ನೀಡಿದೆ.ಅಷ್ಟೆ ಅಲ್ಲದೆ ಸೇತುವೆ ನಿರ್ಮಾಣದ ‌ವೇಳೆ ಸರಿಯಾದ ಕಬ್ಬಿಣ,‌‌ ಸಿಮೆಂಟ್ ಬಳಸಿಲ್ಲ.ಅದು ಅಲ್ಲದೆ‌ ಉಪ್ಪು ನೀರಿನ ಮರಳನ್ನ ಬಳಸಲಾಗಿದೆ. ಇದನ್ನ ಬಳಸಬಾರದು ಎನ್ನುವ ಬಗ್ಗೆ ‌ನಿಯಮವಿದ್ದರೂ ಅದನ್ನ ಗಾಳಿಗೆ ತೂರಿ ಕಾಮಗಾರಿ ಮಾಡಲಾಗಿದೆ.

ಇದನ್ನೂ ಓದಿ

ಆರಂಭದಿಂದಲ್ಲೂ ಕಳಪೆ ಕಾಮಗಾರಿ ನಡೆಸುತ್ತಿರವ ಬಗ್ಗೆ ಅನೇಕ‌ ಬಾರಿ ಸ್ಥಳೀಯರು ಎಚ್ಚರಿಕೆ‌ ನೀಡುತ್ತಾ ಬಂದಿದ್ದಾರೆ, ಆದರೆ ಕಾಮಗಾರಿ ಪಡೆದ‌ ಕಂಪನಿ ಮಾತ್ರ‌ ಕೋಟಿ ಕೋಟಿ ಹಣವನ್ನ ಲೂಟಿ ಹೊಡೆಯಬೇಕೆಂದು ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆ. ಈ ಕಳಪೆ‌ ಕಾಮಗಾರಿ ಹಿಂದೆ ಗುತ್ತಿಗೆ ಕಂಪನಿಯಷ್ಟೆ ಅಲ್ಲದೇ ಸಂಬಂಧಿಸಿದ ಅಧಿಕಾರಿಗಳು ಶಾಮೀಲಾಗಿದ್ದಾರೆ.ಇದರಲ್ಲಿ ಯಾರೆಲ್ಲಾ ಎಷ್ಟೆಷ್ಟು ನುಂಗಿ ನೀರು ಕುಡಿದು ಕಳಪೆ‌ ಕಾಮಗಾರಿಗೆ ಶಾಮೀಲಾಗಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಸಮಗ್ರ ತನಿಖೆ ಆಗಬೇಕಿದೆ.

ಇಲ್ಲದೆ ಹೋದರೆ ತಕ್ಷಣ ಗುತ್ತಿಗೆ ಪಡೆದ ಕಂಪನಿಯಿಂದ‌ ಕಾಮಗಾರಿ ವಾಪಸ್ ಪಡೆದು ಬೇರೆ‌ ಕಂಪನಿಗೆ ನೀಡಬೇಕಿದೆ..ಇಲ್ಲದೆ ಹೋದರೆ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಕಂಪನಿಯ ಕಳಪೆ ಕಾಮಗಾರಿಯಿಂದಾಗಿ ಸೇತುವೆ ಮೇಲೆ ಓಡಾಡುವ ಜನ ಪ್ರಾಣಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.