ಬೆಂಗಳೂರು: ಬಂಗಾರ ಪ್ರಿಯರಿಗೆ ಸಿಹಿ ನ್ಯೂಸ್ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಕಳೆದ 2 ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಡಿದೆ, ದಸರಾ ಸಂದರ್ಭದಲ್ಲಿ ಬಂಗಾರದ ದರಲ್ಲಿ ಇಳಿಕೆಯಾಗಿದ್ದು, ಚಿನ್ನ ಖರೀದಿ ಮಾಡುವವರಿಗೆ ಖುಷಿ ತಂದಿದೆ.
ಬೆಂಗಳೂರಲ್ಲಿ ಇಂದು 22 ಕ್ಯಾರಟ್ ಗೋಲ್ಡ್ ರೇಟ್ ಒಂದು ಗ್ರಾಮ್ಗೆ 7,030 ರೂ. ಇದೆ. ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲೂ ಒಂದು ಗ್ರಾಮ್ ಚಿನ್ನದ ಬೆಲೆ ಕ್ರಮವಾಗಿ 7,030 ರೂ. ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮಾತ್ರ ಚಿನ್ನದ ಬೆಲೆ 7,045 ರೂ. ಆಗಿದೆ. ಇಷ್ಟೇ ಅಲ್ಲ ಪ್ರತಿ ಗ್ರಾಮ್ 18 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 5,752 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,030 ರೂ. ಇದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) ಮಾತ್ರ 7,669 ರೂ. ಇದೆ. ಹೀಗಾಗಿ ಬಂಗಾರ ಪ್ರೀಯರು ಖರೀದಿಗೆ ಮುಂದಾಗಿದ್ದಾರೆ.
ಗಮನಿಸಿ