ಸುದ್ದಿಬಿಂದು ಬ್ಯೂರೋ ವರದಿ
ಪಣಜಿ: ಗೋವಾದ ಬಾಗಾ ಬೀಚ್‍ನಲ್ಲಿ ಸುಮಾರು 15 ಜನ ಪ್ರವಾಸಿಗರಿದ್ದ ಪ್ರವಾಸಿ ಬೋಟ್ ಮುಗುಚಿಬಿದ್ದ ಘಟನೆ ಗುರುವಾರ ನಡೆದಿದೆ. ಈ ಅವಘಡದಲ್ಲಿ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದಾರೆ. ಎಲ್ಲ ಪ್ರವಾಸಿಗರನ್ನೂ ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಗಾ ಬೀಚ್ ನಲ್ಲಿ ಪ್ರವಾಸಿ ಬೋಟ್ ಮುಗುಚಿದ ಘಟನೆಯ ಸಂದರ್ಭದಲ್ಲಿ ಲೈಫ ಗಾರ್ಡ ಸಿಬ್ಬಂಧಿಗಳು ಎಲ್ಲ ಪ್ರವಾಸಿಗರನ್ನೂ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಆದರೆ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೋಟ್ ನಲ್ಲಿ ಸುಮಾರು 15 ಜನ ಪ್ರವಾಸಿಗರು ಜಲಕ್ರೀಡೆಗೆ ತೆರಳಿದ್ದರು ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೋಟ್ ನಲ್ಲಿ ತಾಂತ್ರಿಕ ದೋಷ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶಾಸಕ ಮೈಕಲ್ ಲೋಬೊ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಗಮನಿಸಿ