ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಅಪರೇಷನ್‌ ಕಾಂಗ್ರೆಸ್ ‌ನಡೆಸಲಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಎರಡು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಯಲ್ಲಾಪುರ ಹಾಗೂ ಕುಮಟ ಈ ಎರಡು ಕ್ಷೇತ್ರ ದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದಾರೆ. ಈಗಾಗಲೆ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ಜೋರಾಗಿರುವಾಗಲೆ ಕುಮಟ ಕ್ಷೇತ್ರದ‌ ಜಾತ್ಯಾತೀತ ಹೋರಾಟದ ಮೂಲಕ ಗುರುತಿಸಿಕೊಂಡು ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ ಅವರು ಸಹ ಸದ್ಯದಲ್ಲೆ‌ ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಬಗ್ಗೆ‌ ಕಾಂಗ್ರೆಸ್ ‌ಹಾಗೂ ಬಿಜೆಪಿ ಮೂಲಗಳಿಂದ ಕೇಳಿ ಬರುತ್ತಿದೆ.

ಕುಮಟ ಕ್ಷೇತ್ರದ ಹಾಲಿ ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ ಅವರು‌ ಆರಂಭದ ರಾಜಕಾರಣದಲ್ಲಿ ಜೆಡಿಎಸ್ ನಲ್ಲಿ ಗುರುಸಿಕೊಂಡು ಶಾಸಕರಾಗಿದ್ದರು. ಜಾತ್ಯಾತೀತ ಹೋರಾಟದ ಮೂಲಕ‌‌ ಜೆಡಿಎಸ್ ನಿಂದ ಮೊದಲ‌ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರಿ ತಮ್ಮದೆ ಒಂದಿಷ್ಟು ವರ್ಚಸ್ಸಿನ ಮೇಲೆ ಗೆದ್ದು ಶಾಸಕರಾಗಿದ್ದಾರೆ. ಈ ಭಾರೀಯ ಚುನಾವಣೆಯಲ್ಲಿ ‌ಅವರದ್ದೆ ಪಕ್ಷದ ಅನೇಕ‌ ಮುಖಂಡರು ಅವರನ್ನ ಸೋಲಿಸಲು ತೆರೆ ಮರೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು. ಅದು ದಿನಕರ ಶೆಟ್ಟಿ ಅವರಿಗೂ ಗೋತ್ತಿರುವ ವಿಚಾರ.

ಹೀಗಾಗಿ ಇದೆ ಪಕ್ಷದಲ್ಲಿ ಇದ್ದರೆ ‌ಮುಂದೆ ತಮ್ಮಗೆ ಭವಿಷ್ಯಇಲ್ಲ‌ ಎಂದು ತಿಳಿದಿರುವ ಶಾಸಕ ದಿನಕರ‌ ಶೆಟ್ಟಿ ಅವರು ಕಾಂಗ್ರೆಸ್ ‌ಸೇರಲಿದ್ದಾರೆ ಎನ್ನುವ ಚರ್ಚೆಗಳು ಕ್ಚೇತ್ರದ‌ ತುಂಬಾ ಜೋರಾಗಿ ಕೇಳಿ ಬರುತ್ತಿದೆ. 2018 ಹಾಗೂ 2023 ರ ಚುನಾವಣೆಯಲ್ಲಿ ಅವರದ್ದೆ ಪಕ್ಷದ‌ ಮುಂಖಡರು ದಿನಕರ ಶೆಟ್ಟಿ ಅವರನ್ನ ಸೋಲಿಸ‌ಬೇಕು ಎಂದು ‌ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಎರಡನೇ ಬಾರಿಗೆ ಸಹ ವಿರೋಧದ್ದ ನಡುವೆ ಗೆದ್ದು ಶಾಸಕರಾಗಿದ್ದಾರೆ.ಸದ್ಯ ಬಿಜೆಪಿಯಲ್ಲಿದ್ದ ದಿನಕರ ಶೆಟ್ ಅವರನ್ನ‌‌ ಸೆಳೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು ಇದು ಯಶ್ವಸಿ ಕಾಣಲಿದೇಯಾ ಎಂದು ಕಾದುನೋಡಬೇಕಿದೆ..

ಜೆಡಿಎಸ್ ನಲ್ಲಿ ಇದ್ದಾಗ ಬಿಜೆಪಿಯಿಂದ ಆಹ್ವಾನವಿತ್ತು‌.
ದಿನಕರ ಶೆಟ್ಟಿ ಅವರು ಈ ಹಿಂದೆ ಜೆಡಿಎಸ್ ಶಾಸಕರಾಗಿದ್ದಾಗ ಅಪರೇಷನ್‌ ಬಿಜೆಪಿ ನಡೆಸಿದ ವೇಳೆ ಬಿಜೆಪಿಗೆ ಬರುವಂತೆ ಆಹ್ವಾನಿಸಲಾಯಿತು. ಆದರೆ ಪಕ್ಷ ನಿಷ್ಟೆಯಿಂದ ಅಂದು ಅವರು ಬಿಜೆಪಿಗೆ ಸೇರದೆ ಜೆಡಿಎಸ್ ನಲ್ಲಿಯೆ ಉಳಿದುಕೊಂಡಿದ್ದರು. ಆದರೆ ಈಗ ಕಾಂಗ್ರೆಸ್ ನಿಂದ ಆಹ್ವಾನ ಬಂದಿದೆ ಎನ್ನಲಾಗುತ್ತಿದ್ದು, ಇಲ್ಲಿಯೂ ಶೆಟ್ಟರು ಪಕ್ಷ ನಿಷ್ಠೆಯಿಂದ ಬಿಜೆಪಿಯಲ್ಲಿ ಉಳಿಯಲಿದ್ದಾರ ಅಥವಾ ಕಾಂಗ್ರೆಸ್ ಗೆ ಸೇರಲಿದ್ದಾರ ಎನ್ನುವ ಬಗ್ಗೆ ಶಾಸಕರೆ ತೀರ್ಮಾನ ತೆಗೆದುಕೊಳ್ಳಬೇಕಿದೆ.