ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಸಂಸ್ಕೃತಿ, ಧರ್ಮ, ಧಾರ್ಮಿಕತೆಯನ್ನ ಉಳಿಸುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ ಅಂತಾ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬರ್ಗಿಯಲ್ಲಿ ಶಾರದೋತ್ಸವ ಸಮಿತಿ ಅವರಿಂದ 18ನೇ ವರ್ಷದ ಮೂರನೇ ದಿನದ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಶಾಸಕ ದಿನಕರ ಶೆಟ್ಟಿ ಅವರು ಬರ್ಗಿಯಲ್ಲಿ ಯಾವುದೇ ಕಾರ್ಯಕ್ರಮವನ್ನ ಮಾಡಿದ್ದರು ಕೂಡ ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಾರೆ. ಶಾಸಕನಾಗುವ ಮೊದಲಿನಿಂದಲ್ಲೂ ಸಹ ನಾನು ಬರ್ಗಿ ಊರಿನ ಜನರ ಜೊತೆ ಬೆರೆತಿದ್ದೇನೆ..ಇಲ್ಲಿನ ಯುವಕರು ಉತ್ತಮವಾದ ಸಂಘಟನೆ ಹೊಂದಿದ್ದಾರೆ.ಇದಕ್ಕೆಲ್ಲಾ ಶಿಕ್ಷಣವೆ ಕಾರಣ.ಎಲ್ಲದಕ್ಕೂ ಶಿಕ್ಷಣ ಜೊತೆಗೆ ಸಂಸ್ಕೃತಿಯೂ ಇರಬೇಕು. ಅವೇರಡನ್ನೂ ಇಲ್ಲಿ ಕಾಣಬಹುದಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿ ನಿವೃತ್ತಿ ಹೊಂದಿರುವ ಭಾಸ್ಕರ ಎಸ್ ದೇಸಾಯಿ, ಯಜಮಾನ ದೇವಸ್ಥಾನದ ಅರ್ಚಕರಾಗಿ ನಿವೃತ್ತಿ ಹೊಂದಿರುವ ಶ್ರೀಧರ ಗುನಗಾ ಹಾಗೂ ಶಾರದೋತ್ಸವ ಸಮಿತಿಗೆ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಿರುವ ಸುಕ್ರು ಎನ್ ಗೌಡ,ನಾರಾಯಣ ಎನ್ ಗೌಡ ಅವರನ್ನ ಇದೆ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾಗಿರುವ ಸುಧೀರ ಜಿ ಪಂಡಿತ, ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿರುವ ನಾರಾಯಣ ಎಸ್ ನಾಯ್ಕ ಸೇರಿ ಮೊದಲಾದವರು ಹಾಜರಿದ್ದರು..
ಗಮನಿಸಿ