ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ವಿಳಂಬವಾಗುತ್ತಿದ್ದು ನಾನಾ ಕಾರಣಗಳಿಂದ ಮುಂದೂಡುತ್ತಲೇ ಇದೆ. ಸೋವಾರದ ವೇಳೆ ದರ್ಶನಗೆ ಬೇಲ್ ಸಿಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ರವಾನೆ ಮಾಡಿದ್ದಾರೆ.
ನವಗ್ರಹ ಸಿನಿಮಾದಲ್ಲಿ ನಟ ದರ್ಶನ್ ನಟಿಸಿದ್ದು, ಈ ಬಾರಿ ದಸರಾ ಸಂದರ್ಭದಲ್ಲಿ ರಿರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಖುದ್ದು ಪೋಸ್ಟರ್ ಹಂಚಿಕೊಂಡಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಶುಭ ಸಂದೇಶ ಕೊಟ್ಟಿದ್ದಾರೆ.
ದರ್ಶನ ನಟಿಸಿರುವ ನವಗ್ರಹ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಬಾರಿಯ ಸಿನಿಮಾ ವೀಕ್ಷಿಸುವ ಅನುಭವವು ಮತ್ತಷ್ಟು ಡಿಫರೆಂಟ್ ಆಗಿರಲಿದೆ. ದರ್ಶನ್ ಅಭಿಮಾನಿಗಳು ಈ ನವಗ್ರಹ ಸಿನಿಮಾ ನೋಡಲು ಸಜ್ಜಾಗುವಂತೆ ಪೊಸ್ಟ್ ಮಾಡಿದ್ದಾರೆ.
ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವದಿಸಲಿ ಒಳ್ಳೆತನಕ್ಕೆ ಗೆಲುವು ಸಿಕ್ಕೇ ಸಿಗುತ್ತೆ ಎಂದು ನಿಜವಾದ ದಿನವಿದು’ ಎಂದು ದಸರಾ ಹಬ್ಬವನ್ನು ಉಲ್ಲೇಖಿಸಿ ವಿಜಯಲಕ್ಷ್ಮಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇದನ್ನು ಎಲ್ಲರೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ. ನಟ ದರ್ಶನ ಪತ್ನಿ ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಅನ್ನು ದರ್ಶನ್ ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು. ನಮ್ಮ ಡಿಬಾಸ್ ಜೈಲಿನಿಂದ ಹೊರಗೆ ಬರೋದು ಪಕ್ಕಾ ಎಂದು ಬರೆದುಕೊಳ್ಳುತ್ತಿದ್ದಾರೆ.
ಸೋಮವಾರದಂದು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಈ ಬಾರಿ ಅವರಿಗೆ ಜಾಮೀನು ಸಿಗುವ ಲಕ್ಷಣಗಳು ದಟ್ಟವಾಗಿವೆ ಎಂದೇ ಹೇಳಲಾಗುತ್ತಿದೆ. ಮೊನ್ನೆ ಅಷ್ಟೆ ಪತಿ ದರ್ಶನ್ ಭೇಟಿಯಾಗಲು ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಹೋಗಿದ್ದು. ಈ ವೇಳೆ ದರ್ಶನ್ ಅವರೂ ಕೂಡ ನಗುತ್ತಾ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದರು.
ದರ್ಶನ್ ಪರ ವಕೀಲರು ಕೂಡ ಈ ಬಾರಿ ಜಾಮೀನು ಸಿಗುತ್ತೆ ಎನ್ನುವ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ದರ್ಶನ್ ಕೂಡ ಸ್ಮೈಲ್ ಮಾಡಿದ್ದು, ಈಗ ವಿಜಯಲಕ್ಷ್ಮಿ ಅವರು ಸಂದೇಶ ನೀಡಿರುವುದು ಎಲ್ಲವನ್ನೂ ನೋಡಿದರೆ, ನಟ ದರ್ಶನ್ ಗೆ ಬೇಲ್ ಸಿಗುವ ದಿನಗಳು ಹತ್ತಿರವಾಗುತ್ತಿದೆ ಎಂದು ದರ್ಶನ್ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದು,ಆದಷ್ಟು ಬೇಗ ಡಿಬಾಸ್ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಗಮನಿಸಿ