ಸುದ್ದಿಬಿಂದು ಬ್ಯೂರೋ
ಬೆಂಗಳೂರು : ದೀಪಾವಳಿ ಹಬ್ಬದ ಜೊತೆ ಜೊತೆಗೆ ಸಾಲು ಸಾಲು ರಜೆಗಳು ಬಂದಿರುವುದರಿಂದ‌ ಖಾಸಗಿ ಬಸ್ ದರದಲ್ಲಿ ಭಾರೀ ಏರಿಕೆ ಉಂಟಾಗಿದೆ. ಪ್ರಯಣಿಕರು ಸಂಕಷ್ಟಕ್ಕೆ ‌ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವವರು ಹಬ್ಬಕ್ಕೆಂದು ಊರಿಗೆ ತೆರಳಬೇಕು ಅಂದರೆ ಶೇಕಡಾ 30ರಷ್ಟು ದರ ಹೆಚ್ಚಳವಾಗಿದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಕಾರವಾರ, ಗೋಕರ್ಣ, ಕುಮಟಾ, ಪ್ರಯಾಣಿಸಬೇಕು ಅಂದರಡ 750ರಿಂದ 850ರಷ್ಟಿತ್ತು. ಆದರೆ ಇದೀಗ 1800ರಿಂದ‌ 2500ರಷ್ಟು ಸರ ಏರಿಕೆಯಾಗಿದೆ.ಇನ್ನೂ ಹಬ್ಬಕ್ಕೆ ಎರಡು ದಿನಗಳಿದ್ದು, ಇಂದಿನ ದರಕ್ಕಿಂತ ನಾಳೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ. ಒಂದು ವೇಳೆ ಆ ಮಾರ್ಗದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾದಲ್ಲಿ ಇನ್ನೂ ದರ ಏರಿಕೆ ಮಾಡಬಹುದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು , ಶಿವಮೊಗ್ಗ, ಹಾಸನ , ಧರ್ಮಸ್ಥಳ ಮಂಗಳೂರು, ಕುಂದಾಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಯಾದಗಿರಿ, ಮತ್ತು ಬೀದರ್ ಮುಂತಾದ ವಿವಿಧ ಸ್ಥಳಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ಓಡಿಸುವುದಾಗಿ ತಿಳಿಸಿದ್ದಾರೆ.