ಸುದ್ದಿಬಿಂದು ಬ್ಯೂರೋ ವರದಿ
Dandeli/ದಾಂಡೇಲಿ:ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಪ್ರವಾಸಿಗರ ಕಾರೊಂದು ದಾಂಡೇಲಿ – ಅಂಬಿಕಾನಗರ ರಸ್ತೆಯ ಬಡಕಾನಶಿರಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾದ ಘಟನೆ ಇಂದು ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ನಡೆದಿದೆ.
ಕೆಎ :04 ಎಡಿ: 9275 ಸಂಖ್ಯೆಯ ಕಾರೊಂದು ಬೆಂಗಳೂರು ಕಡೆಯಿಂದ ದಾಂಡೇಲಿಗೆ ಬರುತ್ತಿದ್ದಂತಹ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಡಕಾನಶಿರಡಾದ ಹತ್ತಿರ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.
ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.
ಇದನ್ನು ಓದಿ
- ಇಂದಿನ ಪ್ರಮುಖ ಸುದ್ದಿಗಳು: ಯುಟಿ ಖಾದರ್ ಆರೋಗ್ಯದ ಬಗ್ಗೆ ವದಂತಿ, ಸೌದಿ ಅರೇಬಿಯಾದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ಮನವಿ
- ಪಶ್ಚಿಮ ಪದವೀಧರ ಚುನಾವಣೆ : ಉತ್ತರಕನ್ನಡ ಸೇರಿ ನಾಲ್ಕು ಜಿಲ್ಲೆಯಲ್ಲಿ 75.62ರಷ್ಟು ಮತದಾನ
- ಸಿದ್ದರಾಮಯ್ಯ ವಿಡಿಯೋ ವಿವಾದ: ಕೃಪಾ ಆಳ್ವಗೆ ಶೋಕಾಸ್ ನೋಟಿಸ್
- ಅಂಕೋಲಾ–ಯಲ್ಲಾಪುರ ಹೆದ್ದಾರಿ ಯಮಲೋಕದ ಹಾದಿ ! ಹೆಜ್ಜೆಹೆಜ್ಜೆಗೂ ಭಾರೀ ಹೊಂಡ, ಜನಪ್ರತಿನಿಧಿಗಳು ಎಲ್ಲಿ?

