ಸುದ್ದಿಬಿಂದು ಬ್ಯೂರೋ ವರದಿ/suddibindu Digital News
ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ರೇಸ್‌‌ನಲ್ಲಿ ನಾನು ಇಲ್ಲ ಎಂದು ಹೇಳಿದ. ಅಣ್ಣಮಲೈ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ.

ಕೋಯಂಬತ್ತೂರಿನಲ್ಲಿ ಮಾತನಾಡಿದ ಅವರು, “ನಾನು ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ನಾವು ಎಲ್ಲರೂ ಒಗ್ಗೂಡಿಬಂದು ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.

ನಾನು ಪಕ್ಷದ ಭವಿಷ್ಯವನ್ನು ಉಜ್ವಲವಾಗಿಸಲು ಬಯಸುತ್ತೇನೆ. ಬಿಜೆಪಿ ಬೆಳವಣಿಗೆಗಾಗಿ ಅನೇಕ ನಾಯಕರು ತಮ್ಮ ಜೀವನವನ್ನು ಬಲಿಕೊಟ್ಟಿದ್ದಾರೆ. ನಾನೂ ಈ ಪಕ್ಷಕ್ಕೆ ಉತ್ತಮವಾದ ಭವಿಷ್ಯವನ್ನು ಹಾರೈಸುತ್ತೇನೆ. ಅದಕ್ಕಾಗಿ ಈ ಬಾರಿ ಪಕ್ಷದ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸುವುದಿಲ್ಲ. ನಾವು ಎಲ್ಲರೂ ಒಗ್ಗೂಡಿಬಂದು ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಇದಲ್ಲದೆ, ಯಾವುದೇ ರಾಜಕೀಯ ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ,” ಎಂದರು.

ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. “ಇತರ ಪಕ್ಷಗಳಲ್ಲಿ 50 ಜನರು ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಾರೆ. ಆದರೆ ನಾವು ಒಗ್ಗೂಡಿಬಂದು ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ” ಎಂದು ಹೇಳುವ ಮೂಲಕ ಅಣ್ಣಮಲೈ ಪ್ರತಿಪಕ್ಷಗಳ ವಿರುದ್ಧ ತಿರುಗೇಟು ನೀಡಿದ್ದಾರೆ.

2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿಯ ವಿಭಜನೆಯ ಹಿಂದೆ ಅನ್ನಾಮಲೈ ಕಾರಣ ಎಂದು ಹೇಳಲಾಗುತ್ತಿತ್ತು. ಈಗ, ಪಕ್ಷಗಳ ನಡುವಿನ ಮೈತ್ರಿ ಚರ್ಚೆಗಳು ತೀವ್ರಗೊಂಡಿರುವ ಕಾರಣ, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅನ್ನಾಮಲೈ ಪಕ್ಕಕ್ಕಾಗಿದ್ದಾರೆ. ಚುನಾವಣೆಯ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯ ಶಕ್ತಿಯನ್ನು ಹೆಚ್ಚಿಸಲು ಜಾತಿಯ ಸಮೀಕರಣಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ