ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಗಡಿಭಾಗವಾದ ಮಾಜಾಳಿ ಚೆಕ್ ಪೊಸ್ಟ್‌ನಲ್ಲಿ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮುನಿಸು ಉಂಟಾಗಿದ್ದು, ಸದ್ಯ ಗಡಿಯಲ್ಲಿ ಪೊಲೀಸ್ ಇಲಾಖೆಯಿಂದ ತಪಾಸಣೆ ನಿಲ್ಲಿಸಲಾಗಿದ್ದು, ಅಬಕಾರ ಇಲಾಖೆಯ ವರ್ತನೆ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ.
ಗೋವಾದಿಂದ ಅಕ್ರಮ ಮದ್ಯಸಾಗಾಟ ಸೇರಿದಂತೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮಾಜಾಳಿ ಚೆಕ್ ಪೊಸ್ಟ್‌ನಲ್ಲಿ ಪೊಲೀಸ್ ಇಲಾಖೆ ತಪಾಸಣೆ ನಡೆಸುತ್ತಿತ್ತು.ಆದರೆ ಅಬಕಾರಿ ಇಲಾಖೆ ಮಾಡುವ ಒಂದಿಷ್ಟು ಲೋಪದೋಷಗಳನ್ನ ಸಹ ಪೊಲೀಸ್ ಇಲಾಖೆಯೇ ಹೊತ್ತಿಕೊಳ್ಳಬೇಕಾದ ಪರಿಸ್ಥಿತಿ ಸಹ ಪದೆ ಪದೆ ಪೊಲೀಸ್ ಇಲಾಖೆ ಎದುರಾಗಿತ್ತು.ಎನ್ನಲಾಗಿದೆ. ಇತ್ತಿಚೇಗೆ ಲಾರಿ ಚಾಲಕನ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿ ಹಲ್ಲೆ ಮಾಡಿದ ಸಂದರ್ಭದಲ್ಲಿ ಪೊಲೀಸರೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆನ್ನುವ ಆರೋಪವನ್ನ ಪೊಲೀಸ ಇಲಾಖೆ ಎದುರಿಸಬೇಕಾದ ಸಂದರ್ಭ ಸಹ ಎದುರಾಗಿತ್ತು.
ಅಷ್ಟೆ ಅಲ್ಲದೆ ಗೋವಾದಿಂದ ಅಕ್ರಮ ಮದ್ಯಸಾಗಾಟ ವೇಳೆ ಏನಾದ್ರೂ ನಡೆದರೆ ಅಲ್ಲಿರೋ ಪೊಲೀಸರೆ ಸರಿಯಾಗಿ ತಪಾಸಣೆ ಮಾಡಿಲ್ಲ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರತ್ತಿದ್ದವು. ಹೀಗಾಗಿ ಪೊಲೀಸ್ ಇಲಾಖೆ ಅನೇಕ ಬಾರಿ ಮುಜುಗರಕ್ಕೂ ಸಹ ಒಳಗಾಗಬೇಕಾದ ಪರಿಸ್ಥಿತಿ ಉಂಟಾಗಿತ್ತು..ಹೀಗಾಗಿ ಮಾಡದ ತಪ್ಪಿಗೆ ಪದೆ ಪದೆ ಪೊಲೀಸ್ ಇಲಾಖೆ ಸಾರ್ವಜನಿಕರ ಒಂದಿಷ್ಟು ಆರೋಪಗಳನ್ನ ಎದುರಿಸಬೇಕಾಗಿತ್ತು. ಹೀಗಾಗಿ ಸದ್ಯ ಅಬಕಾರಿ ಇಲಾಖೆಯಿಂದ ಪೊಲೀಸ ಇಲಾಖೆ ಅಂತರ ಕಾಯ್ದುಕೊಂಡಿದೆ..
ಶೀಘ್ರದಲ್ಲೇ ಚೆಕ್ ಪೊಸ್ಟ್‌ಗಳಲ್ಲಿ ಪ್ರತ್ಯೇಕ ಠಾಣೆ
ಮಾಜಾಳಿ ಹಾಗೂ ಅನ್ನಮೋಡ್ ಈ ಎರಡು ಚೆಕ್ ಪೊಸ್ಟ್‌ಗಳಲ್ಲಿ ಅಬಕಾರಿ ಇಲಾಖೆ ಜೊತೆ ನಮ್ಮ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾ ಇದ್ದರೂ. ಆದರೆ ಕೆಲವೊಂದು ಘಟನೆಯಲ್ಲಿ ಸುಖಾಸುಮ್ಮನೆ ನಮ್ಮ ಪೊಲೀಸರ ಮೇಲೆ ಆರೋಪಗಳು ಕೇಳಿಬಂದಿದ್ದವು,ಹೀಗಾಗಿ ಸದ್ಯ ನಮ್ಮ ಸಿಬ್ಬಂದಿಗಳನ್ನ ನೇಮಿಸಿಲ್ಲ. ಇನ್ನೂ ಕೆಲ ದಿನದಲ್ಲಿ ಅಬಕಾರಿ ಇಲಾಖೆಯ ಇನ್ನೂ ಬೇರೆಡೆ ಠಾಣೆ ನಿರ್ಮಿಸಿ ನಮ್ಮ ಸಿಬ್ಬಂದಿಗಳನ್ನ ನೇಮಕ ಮಾಡುವುದರ ಜೊತೆಗೆ ಅಕ್ರಮ ತಡೆಗೆ ನಮ್ಮ ಇಲಾಖೆಯಿಂದ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ