suddibindu.in
ಕಾರವಾರ : ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿರೂರು ಗುಡ್ಡಕುಸಿತ ಉಂಟಾಗಿ ಸಾಕಷ್ಟು ಸಾವು ನೋವುಗಳು ಉಂಟಾಗಿದೆ.ಈಗಾಗಲೇ ಇದರ ಕಾರ್ಯಚರಣೆಗಾಗಿ ಲಕ್ಷಾಂತರ ರೂ ಹಣ ವೆಚ್ಚವಾಗಿದ್ದು, ಎನ್.ಎಚ್ಐನಿಂದ ಜಿಲ್ಲಾಡಳಿತಕ್ಕೆ 41 ಲಕ್ಷ ವೆಚ್ಚವನ್ನ ಭರಿಸಲಾಗಿದೆ ಎಂದು ಶಾಸಕ ಸತೀಶ ಸೈಲ್ ಮಾಹಿತಿ ನೀಡಿದ್ದಾರೆ.
ಜುಲೈ 16ರಂದು ಶಿರೂರು ಗುಡ್ಡಕುಸಿತ ಉಂಟಾಗಿ ಹನ್ನೊಂದು ಮಂದಿ ಕಣ್ಣಮರೆಯಾಗಿದ್ದರು. ಅವರಲ್ಲಿ ಈಗಾಗಲೇ ಎಂಟು ಮಂದಿಯ ಶವ ಪತ್ತೆಯಾಗಿದ್ದು ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಇದುವರೆಗೆ ಈ ಎಲ್ಲಾ ಕಾರ್ಯಚರಣಾಗಿ ಸರಿಸುಮಾರು 80 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದೆ ಎನ್ನಲಾಗಿದೆ. ವಿವಿಧ ಸಂಘ ಸಂಸ್ಥೆಗಳಿಂದ 10ಲಕ್ಷ ರೂ ಹಣವನ್ನ ಕಾರ್ಯಚರಣೆಗಾಗಿ ಸಹಾಯ ಕೇಳಲಾಗಿತ್ತು.ಆದರೆ ಅವುಗಳಲ್ಲಿ 5ಲಕ್ಷ ಮಾತ್ರ ಭರಣವಾಗಿದೆ ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಭಟ್ಕಳ ಶಾಸಕರಾಗಿರುವ ಮಂಕಾಳು ವೈದ್ಯ,ಹಾಗೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ತಮ್ಮ ಶಾಸಕ ನಿಧಿಯಿಂದ ತಲಾ ಹತ್ತು ಲಕ್ಷ ರೂ ಹಣವನ್ನ ಶಿರೂರು ಕಾರ್ಯಚರಣೆಗಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಕಾರವಾರ ಶಾಸಕ ಸತೀಶ್ ಸೈಲ್ ಅವರು ತಮ್ಮ ಶಾಸಕ ನಿಧಿಯಿಂದ 25ಲಕ್ಷ ಹಣವನ್ನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಷ್ಟೆ ಅಲ್ಲದೇ ಒಂದೊಮ್ಮೆ ಕಡಿಮೆ ಆದಲ್ಲಿ ಎಲ್ಲವನ್ನೂ ತಾವೇ ತಮ್ಮ ಕೈಯಿಂದ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ