ಸುದ್ದಿಬಿಂದು ಬ್ಯೂರೋ
ಕಾರವಾರ: ದೇಶವಿರೋಧಿ ಮಾತನಾಡುವವರನ್ನ ಗುಂಡಿಕ್ಕಿ ಸಾಯಿಸುವ ಕಾನೂನು ತರಬೇಕು ಎನ್ನುವ ಈಶ್ವರಪ್ಪ ಹೇಳಿಕೆ ಬೆನ್ನಲ್ಲೇ ಸಚಿವ ಚಲುವರಾಯಸ್ವಾಮಿ ಸಹ ಬಿಜೆಪಿಯ ನಾಯಕರೊಬ್ಬರ ಹೆಸರನ್ನ ಹೇಳಿ ಅವರನ್ನ ಯಾಕೆ ಗುಂಡಿಕ್ಕಿ ಸಾಯಿಸಬಾರದು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ,ಮನೆಯ ಹಿರಿಯರು ಮಾಡುವ ಕೆಲಸ ಅವರ ನಡುವಳಿಕೆ ಮನೆಯ ಕಿರಿಯ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಈ ಗಾದೆ ಮಾತಿನಂತೆ ಈತ ಮಾಜಿ ಸಚಿವ ಈಶ್ವರಪ್ಪ ಅವರು ನಿನ್ನೆಯಷ್ಟೆ ದೇಶವಿರೋಧಿ ಮಾತನಾಡುವವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎನ್ನುವ ಹೇಳಿಕೆ ನೀಡಿದ್ದರು. ಆದರೆ ಅವರ ಹೇಳಿಕೆ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ಸಚಿವ ಚಲುವರಾಯಸ್ವಾಮಿ ಅವರು ಇಂತಹ ವ್ಯಕ್ತಿಯನ್ನ ಯಾಕೆ ಗುಂಡಿಕ್ಕಿ ಕೊಲ್ಲಬಾರದು ಎನ್ನುವ ಹೇಳಿಕೆ ನೀಡುವ ಮೂಲಕ ಜನರಲ್ಲಿ ಕಿಚ್ಚು ಹಚ್ಚಿಸುವ ಕೆಲಸ ಮಾಡಿರುವಂತಿದೆ.
ಈ ಇಬ್ಬರೂ ನಾಯಕರ ವಿವಾಧಾತ್ಮ ಹೇಳಿಕೆಗಳನ್ನ ಗಮನಿಸಿದೆ.ಭಾರತ ದೇಶ ಯಾವ ಕಡೆ ಸಾಗುತ್ತಿಗೆ ಎನ್ನುವ ಬಗ್ಗೆ ಪ್ರತಿಯೊಬ್ಬರು ಆಲೋಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಾಯಕರುಗಳು ರಾಜಕೀಯ ತೆವಲಿಗಾಗಿ ಈ ರೀತಿ ಹೇಳಿಕೆಗಳನ್ನ ನೀಡುವ ಮೂಲಕ ಜನರ ದಾರಿ ತಪ್ಪಿಸುವುದನ್ನ ನಿಲ್ಲಿಸಬೇಕಿದೆ.