suddibindu.in
ಕುಮಟಾ : ಸಂತೆ ಮಾರ್ಕೆಟ್ ಮುಗಿಸಿ ಹೆದ್ದಾರಿ ಮಾಡುತ್ತಿದ್ದ ವ್ಯಕ್ತಿ ಓರ್ವನಿಗೆ ಕಾರ ಡಿಕ್ಕಿ ಹೊಡೆದು ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಕೋಡ್ಕಣಿ ನಿವಾಸಿಯಾಗಿರುವ ಗಣೇಶ ಜಟ್ಟಿ ಅಂಬಿಗ (55) ಎಂಬಾತನೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಇಂದು ಸಂಜೆ ಮಿರ್ಜಾನದಲ್ಲಿ ಸಂತೆ ಮಾರ್ಕೆಟ್ ಮುಗಿಸಿ ಮನೆಗೆ ಹೋಗಲು ಒಂದು ಬದಿಯಿಂದ ಇನ್ನೊಂದು ಬದಿಗೆ ಹೆದ್ದಾರಿ ದಾಟುತ್ತಿದ್ದ ಎನ್ನಲಾಗಿದೆ. ಈ ವೇಳೆ ಅಂಕೋಲಾ ಕಡೆಯಿಂದ ಕುಮಟಾ ಕಡೆ ಚಲಿಸುತ್ತಿದ್ದ ಮಂಗಳೂರು ನೋಂದಣಿ ಹೊಂದಿದ್ದ ಕಾರು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿಹೊಡೆದಿದೆ.
ಪರಿಣಾಮ ಆತನ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಸ್ಥಳೀಯರ ಸಹಾಯದಿಂದ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ