ಸುದ್ದಿಬಿಂದು ಬ್ಯೂರೋ
ಕುಮಟಾ :ಪಟ್ಟಣದ ಸುಭಾಸ್ ರಸ್ತೆಯಲ್ಲಿರುವ ಜಗದಂಬಾ ಇಲೆಕ್ಟ್ರಿಕಲ್ಸ್ ಅಂಗಡಿ ಸಹಿತ ಐದು ಅಂತಸ್ತಿನ ಕಟ್ಟಡದಲ್ಲಿರುವ ಲಿಪ್ಟ್ ಏಕಾಏಕಿ ಕಟ್ ಆಗಿರುವ ಪರಿಣಾಮ ಯುವನೋರ್ವ ಮೃತ ಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ರಾಜಸ್ಥಾನ ಮೂಲದ 25 ವರ್ಷದ ಗೋಪಸಿಂಗ್ ಎಂದು ಗೊತ್ತಾಗಿದೆ.ಈತ ಲಿಪ್ಟ್‌ನಲ್ಲಿ ಕೆಳಗಡೆಯಿಂದ ಭಾರವಾದ ವಸ್ತುಗಳನ್ನ ಮೇಲಕ್ಕೆ ಸಾಗಿಸುವ ವೇಳೆ ಲಿಪ್ಟ್‌ನ ಜೈನ್ ಕಟ್ ಕಟ್ಟಾಗಿ ಈ ದುರುಂತ ಸಂಬಂಧಿಸಿರಬಹುದು ಎನ್ನಲಾಗಿದೆ.. ಬೆಳಿಗ್ಗೆ ಈ ಅವಘಡ ಸಂಭವಿಸಿದ್ದು, ಮೃತ ವ್ಯಕ್ತಿ ಜಗದಂಬಾ ಇಲೆಕ್ಟ್ರಿಕಲ್ಸ್ ಕಟ್ಟಡ ಮಾಲಕರ ಸಂಬಂಧಿ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕುಮಟಾ ಪೊಲೀಸರು ಆಗಮಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಈ ಐದು ಅಂತಸ್ತಿನ ಕಟ್ಟಡಕ್ಕೆ ಪುರಸಭೆಯಿಂದ ಅನುಮತಿ ಪಡೆಯಲಾಗಿದೇಯೆ ಎನ್ನುವ ಬಗ್ಗೆ ಇದೀಗ ಘಟನೆ ಬಳಿಕ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ..
ಇದನ್ನೂ ಓದಿ