ಸುದ್ದಿಬಿಂದು ಬ್ಯೂರೋ
ಗೋಕರ್ಣ: ಸಮುದ್ರದಲ್ಲಿ ಈಜಲು ಹೋಗಿ ಕೊಚ್ಚಿಹೋಗಿದ್ದ. ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳ ಪೈಕಿ ಐವರನ್ನ ರಕ್ಷಣೆ ಮಾಡಿದ್ದು,ಓರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ದುಬ್ಬನಸಸಿ ಕಡಲತೀರದಲ್ಲಿ ನಡೆದಿದೆ.
ವಿನಯವಿನಯ ಎಸ್ ವಿ (23) ಎಂಬಾತನೆ ನಾಪತ್ತೆಯಾಗಿದ್ದಾನೆ ಇನ್ನೂ ತನಸ್ವರ್ (25),ಮಷಿರಾ (23), ಮನೋಜ್(23) ಗೋಪಿ (23) ಹಾಗೂ ಮುರುಳಿ (23) ಇವರನ್ನ ರಕ್ಷಣೆ ಮಾಡಲಾಗಿದೆ. ಇವರೆಲ್ಲರೂ ಬೆಂಗಳೂರಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು.
ಇವರು ಮೂಲತಃ ಕೇರಳದವರಾಗಿದ್ದು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಸ್ನೇಹಿತರೆಲ್ಲರೂ ಸೇರಿಕೊಂಡು ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅರಬ್ಬೀ ಸಮುದ್ರದಲ್ಲಿ ಮೋಜು ಮಸ್ತಿಗಾಗಿ ನೀರಿಗೆ ಇಳಿದ ಸಮಯದಲ್ಲಿ ಅಲೆಯ ಅಬ್ಬರಕ್ಕೆ ಆರು ಮಂದಿ ವಿದ್ಯಾರ್ಥಿಗಳು ಕೊಚ್ಚಿಕೊಂಡು ಹೋಗಿದ್ದು, ಐವರನ್ನ ಸ್ಥಳೀಯರು ರಕ್ಷಣೆ ಮಾಡಿದ್ದರೆ. ರಕ್ಷಣೆ ಮಾಡಿದ ಐವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಎಲ್ಲರನ್ನೂ ಸಹ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಿ.ಐ. ವಸಂತ್ ಆಚಾರ್, ಪಿ.ಎಸ್.ಐ. ಖಾದರ್ ಬಾಷಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಹಕಾರಿಸಿದ್ದಾರೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ