ಸುದ್ದಿಬಿಂದು ಬ್ಯೂರೋ
ಕಾರವಾರ : ಲೋಕಸಭಾ ಚುನಾವಣೆಗೆ ಘೋಷಣೆಯೊಂದೆ ಬಾಕಿ ಉಳಿದಿದ್ದು, ಈ ಭಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್(BJP candidate) ಹರಿಪ್ರಕಾಶ್(Hariprakash)ಕೋಣೆಮನೆ ಅವರಿಗೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು,ರಾಜ್ಯಮಟ್ಟದ ಅನೇಕ ಮಾಧ್ಯಮಗಳು ಕೂಡ ಹರಿಪ್ರಕಾಶ ಕೋಣೆಮನೆಯವರಿಗೆ ಟಿಕೆಟ್ ಖಚಿತವೆಂದು ಸುದ್ದಿ ಬಿತ್ತರಿಸುತ್ತದೆ.
ಹರಿಪ್ರಕಾಶ್ ಕೋಣೆಮನೆ ಅವರು ಹಾಲಿ ರಾಜ್ಯ ಬಿಜೆಪಿ ವಕ್ತರರಾಗಿ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪತ್ರಕರ್ತರಾಗಿ ರಾಜ್ಯಮಟ್ಟದಲ್ಲಿ ಸಾಕಷ್ಟು ಜನಮನ್ನಣೆಯನ್ನ ಕೂಡಗಳಿಸಿದ್ದಾರೆ. ಇವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರಾಗಿದ್ದಾರೆ. ಮೊದಲಿನಿಂದಲ್ಲೂ ಇವರು ಆರ್ ಎಸ್ ಎಸ್ ಜೊತೆಗೆ ಸಂಪರ್ಕವನ್ನ ಇಟ್ಟುಕೊಳ್ಳುವುದರೊಂದಿಗೆ ಬಿಜೆಪಿ ಹೈ ಕಮಾಂಡ ಜೊತೆಗೆ ಉತ್ತರಕನ್ನಡ ಜಿಲ್ಲೆಯ RSS ಪ್ರಚಾರಕರಾಗಿದ್ದಾರೆ.
ಇವರು ಕಳೆದ ಒಂದು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಓಡಾಟ ನಡೆಸುತ್ತಿದ್ದು,ಪಕ್ಷದ ಮುಖಂಡರೊಂದಿಗೆ ಉತ್ತಮ ಸ್ನೇಹವನ್ನ ಹೊಂದಿದ್ದಾರೆ. ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪಕ್ಷದ ಯಾವ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಾರದೆ ಇರುವುದು ಹಾಗೂ ಆ ವೇಳೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಆಗಮಿಸಿದಾಗಲೂ ಸಮಾವೇಶದಿಂದ ದೂರ ಉಳಿದಿರುವುದು ಈ ಬಾರೀ ಅನಂತಕುಮಾರ ಹೆಗಡೆ ಅವರಿಗೆ ಲೋಕಸಭಾ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗುತ್ತಿದೆ. ಅವರ ಬದಲಿಗೆ ಅವರದ್ದೆ ,(ಬ್ರಾಹ್ಮಣ)ಸಮಾಜಕ್ಕೆ ಹರಿಪ್ರಕಾಶ ಕೋಣೆಮನೆ ಅವರನ್ನ ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ ಮುಂದಾಗಿದೆ ಎನ್ನಲಾಗಿದೆ.