ಇಂದಿನ ಪಂಚಾಂಗ
ಮಂಗಳವಾರ 13-02-2024ಶೋಭಕೃತ್‍ನಾಮ ಸಂವತ್ಸರ /ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಸಾಧ್ಯ / ಕರಣ: ಭವ
ಸೂರ್ಯೋದಯ : ಬೆ.06.43ಸೂರ್ಯಾಸ್ತ : 06.25ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30
ಈ ದಿನದ ಅದೃಷ್ಟದ ಸಂಖ್ಯೆ : 6-2-5-8
ಮೇಷ ರಾಶಿ : ನಿಮ್ಮ ಗುರಿಯನ್ನು ತಲುಪಲು ನಿಮ್ಮ ಪೋಷಕರ ಬೆಂಬಲ ನಿಮಗೆ ದೊರೆಯಲಿದೆ ವೈಯುಕ್ತ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಹೆಚ್ಚು ಕೆಲಸ ನೀವು ಮಾಡುವುದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ಸಮತೋಲನೆಯನ್ನ ಜೀವನದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಅಗತ್ಯ ಹಾಗಾಗಿ ಎಲ್ಲಾ ಕೆಲಸವನ್ನ ಎಷ್ಟು ಸಮಯ ಕೊಡಬೇಕು ಎಂದು ಮೊದಲೇ ತೀರ್ಮಾನ ಮಾಡಿ ಉಪಯೋಗಿಸಿಕೊಳ್ಳಿ, ನೀವು ಪ್ರಯತ್ನ ಪಟ್ಟ ಎಲ್ಲಾ ಕೆಲಸಗಳು ನೆರವೇರಲಿವೆ
ಅದೃಷ್ಟ ಸಂಖ್ಯೆ :, 8 ಅದೃಷ್ಟ ಬಣ್ಣ : ಕೆಂಪು
ವೃಷಭ ರಾಶಿ : ಆರ್ಥಿಕವಾಗಿ ನೀವು ತುಂಬಾ ಬೆಳೆಯಲಿದ್ದೀರಿ ಹಣ ಹೆಚ್ಚು ನಿಮ್ಮ ಕೈ ಸೇರುವುದರಿಂದ ನಿಮ್ಮ ಕುಟುಂಬ ತುಂಬಾ ಸಂತೋಷದಿಂದ ಕೂಡಿರುತ್ತದೆ ಹೆಚ್ಚು ಗೆಳೆಯರನ್ನು ನೀವು ಸಂಪಾದಿಸಲಿದ್ದೀರಿ ಹಾಗಾಗಿ ಅವರಿಗೆ ಸಹಾಯ ಮಾಡುವಾಗ ತುಂಬಾ ಜಾಗರೂಕತೆಯಿಂದ ಮಾಡಿ, ಗೆಳೆಯರುಗಳಿಂದ ನಿಮಗೆ ತುಂಬಾ ತೊಂದರೆಯಾಗಲಿದೆ ಏಕಾಗ್ರತೆಯನ್ನು ನಿಮ್ಮ ಕೆಲಸದ ಮೇಲಿಡಿ ವ್ಯರ್ಥವಾಗಿ ನಿಮ್ಮ ಗೆಳೆಯರೊಂದಿಗೆ ನಿಮ್ಮ ಅಮೂಲ್ಯ ಸಮಯವನ್ನ ಕಳೆಯಬೇಡಿ ಆದಷ್ಟು ಹೊಸ ಕೆಲಸಗಳು ನಿಮಗೆ ದೊರೆಯಲಿವೆ.
ಅದೃಷ್ಟ ಸಂಖ್ಯೆ : 1 ಅದೃಷ್ಟ ಬಣ್ಞ : ಕೇಸರಿ
ಮಿಥುನ ರಾಶಿ : ಸ್ನೇಹಿತರ ಬೆಂಬಲ ನಿಮಗೆ ಸಿಗುವುದಿಲ್ಲ ಹಾಗಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗುತ್ತೀರಿ ನಕಾರಾತ್ಮಕ ಅಂಶಗಳು ನಿಮ್ಮ ಮನಸ್ಸಿಗೆ ಬಂದರೂ ಸಹ ಅದನ್ನ ತಡೆಯಲು ಬೆಳಗ್ಗೆ ದೇವರ ಧ್ಯಾನ ಮಾಡಿ ನಿಮಗೆ ಈ ತಿಂಗಳು ಹನುಮಂತನ ಜಪ ಮಾಡುವುದರಿಂದ ನಿಮಗೆ ಬರುವ ಎಲ್ಲಾ ಸಣ್ಣಪುಟ್ಟ ಸಮಸ್ಯೆಗಳು ದೂರ ಆಗಲಿದೆ. ನೀವು ಮಾಡುವ ಎಲ್ಲಾ ಕೆಲಸಗಳು ನೆರವೇರುತ್ತದೆ ಹೆಚ್ಚಿನ ಆಯಾಸ ನಿಮಗೆ ಉಂಟಾಗುವುದಿಲ್ಲ ನಿಮ್ಮ ಮನೆಯವರ ಬೆಂಬಲ ನಿಮಗೆ ಖಂಡಿತ ಸಿಗುತ್ತದೆ ಹಾಗಾಗಿ ಸ್ನೇಹಿತರ ಬಗ್ಗೆ ಹೆಚ್ಚು ಯೋಚನೆ ಮಾಡದೆ ಮನೆಯವರ ಸಲಹೆ ಪಡೆದು ಕೆಲಸಗಳನ್ನ ಮಾಡಿ.
ಅದೃಷ್ಟ ಸಂಖ್ಯೆ :7, ಅದೃಷ್ಟ ಬಣ್ಣ : ನೀಲಿ
ಕರ್ಕ ರಾಶಿ : ನೀವು ರಾಜಕೀಯ ಕೆಲಸಗಳನ್ನ ಹೆಚ್ಚಾಗಿ ಮಾಡಬಯಸುತ್ತೀರಾ ಆದರೆ ಹೆಚ್ಚಿನ ಅವಕಾಶಗಳು ನಿಮಗೆ ದೊರಕುವುದಿಲ್ಲ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚು ಜವಾಬ್ದಾರಿ ಇರುವ ಕಾರಣ ಮನೆಯಿಂದ ಹೊರಗಡೆ ಹೋಗಿ ರಾಜಕೀಯ ಕೆಲಸಗಳನ್ನ ಮಾಡಲು ಆಗುವುದಿಲ್ಲ ಹಾಗಾಗಿ ತಮ್ಮ ಸ್ವಂತ ಬಿಸ್ನೆಸ್ ಅನ್ನ ಮನೆಯಲ್ಲೇ ಕೂತು ಮಾಡುವ ಬಗ್ಗೆ ವಿಚಾರ ಮಾಡಿ ಏಕೆಂದರೆ ಮಹಿಳೆಯರು ಹೊರಗಡೆ ಹೋಗಿ ಕೆಲಸ ಮಾಡೋದು ತುಂಬಾ ಕಷ್ಟ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕಾಗಿರುತ್ತದೆ ಹಾಗಾಗಿ ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ
ಅದೃಷ್ಟ ಸಂಖ್ಯೆ : 4 ಅದೃಷ್ಟ ಬಣ್ಣ : ಹಸಿರು
ಸಿಂಹ ರಾಶಿ : ಮಾಡುವ ಕೆಲಸದ ಮೇಲೆ ಮನಸ್ಸು ಇಟ್ಟು ಕಾರ್ಯ ನಿರ್ವಹಿಸಿ, ಸ್ನೇಹಿತರಿಂದ ತೊಂದರೆ ಉಂಟಾಗುತ್ತದೆ. ತಂದೆ ತಾಯಿಯ ಸಹಾಯ ಪಡೆಯಿರಿ ಹೆಚ್ಚಿನ ಕೆಲಸ ನಿಮಗೆ ಸಿಗುವುದರಿಂದ ಬೇರೆ ಕೆಲಸದ ಬಗ್ಗೆ ಅಷ್ಟೊಂದು ಗಮನ ಹೋಗೋದಿಲ್ಲ, ಬಂದು ಬಾಂಧವರು ನಿಮ್ಮ ಬಗ್ಗೆ ಸಿಟ್ಟಾಗುತ್ತಾರೆ ನೀವೇನಾದರೂ ಗೆಳೆಯರ ಅಥವಾ ಬಂದು ಬಂದವರ ಮೇಲೆ ಗಮನ ಇಟ್ಟು ಕೆಲಸ ಮಾಡಲು ಪ್ರಾರಂಭಿಸಿದರೆ ನೀವು ಮಾಡುವ ಎಲ್ಲಾ ಕೆಲಸಗಳಿಗೆ ಅಡೆ-ತಡೆ ಅವರು ಉಂಟು ಮಾಡುತ್ತಾರೆ
ಅದೃಷ್ಟ ಸಂಖ್ಯೆ :6, ಅದೃಷ್ಟ ಬಣ್ಣ: ಗುಲಾಬಿ
ಕನ್ಯಾ ರಾಶಿ: ದೇವರ ಮೇಲೆ ನಂಬಿಕೆ ಇಡಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಕೆಲಸ ಪ್ರಾರಂಭಿಸಿ ಎಲ್ಲ ಒಳ್ಳೆಯದಾಗುತ್ತದೆ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಇರುವ ಕಾರಣ ಗೆಳೆಯರನ್ನು ಭೇಟಿ ಮಾಡಲು ಸಾಧ್ಯ ಆಗೋದಿಲ್ಲ, ಇದರಿಂದ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಮುಂದೆ ಒಂದು ದಿನ ನೀವು ಬಿಡುವಿನ ವೇಳೆಯಲ್ಲಿ ಗೆಳೆಯರನ್ನು ಭೇಟಿ ಮಾಡಬಹುದಾಗಿರುತ್ತದೆ ಯಾವುದೇ ಸಮಸ್ಯೆ ಆಗೋದಿಲ್ಲ ನಿಮ್ಮ ಪ್ರತಿನಿತ್ಯದ ಕೆಲಸದ ಮೇಲೆ ಗಮನವಿಟ್ಟು ಮಾಡಿ ಎಲ್ಲಾ ಒಳ್ಳೆಯದಾಗುತ್ತೆ
ಅದೃಷ್ಟ ಸಂಖ್ಯೆ :1, ಅದೃಷ್ಟ ಬಣ್ಣ: ಮರೂನ್
ತುಲಾ ರಾಶಿ : ಆದಷ್ಟು ಪ್ರಯಾಣ ಮಾಡದಿರಲು ಪ್ರಯತ್ನಿಸಿ. ನಿಮ್ಮ ಗಮನ ಕೇವಲ ನಿಮ್ಮ ಕೆಲಸದ ಮೇಲಿರಲಿ. ಸ್ಕೂಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ತಾವು ಮಾಡಬೇಕು ಅಂದುಕೊಂಡ ಎಲ್ಲಾ ಕೆಲಸಗಳು ಮುನ್ನಡೆಯುತ್ತವೆ ಶಿಕ್ಷಕರ ಅಥವಾ ಸಹಪಾಠಿಗಳ ಸಹಾಯದಿಂದ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ ಆದಷ್ಟು ಹೆಚ್ಚು ಆಟ ಆಡುವುದನ್ನು ನಿಲ್ಲಿಸಿ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಇಡೀ.
ಅದೃಷ್ಟ ಸಂಖ್ಯೆ : 3, ಅದೃಷ್ಟ ಬಣ್ಣ: ಕಿತ್ತಳೆ
ವೃಶ್ಚಿಕ ರಾಶಿ : ಹಲವು ಕಷ್ಟಗಳು ನಿಮ್ಮ ಮುಂದೆ ಬರುತ್ತವೆ ನಿಮ್ಮ ಸ್ವಂತ ಬುದ್ಧಿಯಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬೇಕು ಹಣಕಾಸಿನ ಸಮಸ್ಯೆ ಎದುರಾಗುತ್ತವೆ ನೀವು ನೀಡಿರುವ ಹಣವನ್ನು ನಿಮ್ಮ ಸ್ನೇಹಿತರಿಂದ ಮರುಪಾವತಿಸಲು ತಿಳಿಸಿ ಸಂಬಂಧಿಗಳಿಂದ ಸ್ವಲ್ಪ ದೂರ ಇರಿ ಏಕೆಂದರೆ ಅವರು ನಿಮ್ಮನ್ನು ಹೀಯಾಳಿಸಲಿದ್ದಾರೆ ಮನೆಯವರ ಸಹಾಯ ಪಡೆದು ಕಷ್ಟಪಟ್ಟು ಕೆಲಸ ಮಾಡಿ ನಿಮ್ಮ ಸಮಸ್ಯೆಗಳೆಲ್ಲ ಈಡೇರುತ್ತವೆ, ಚಾಮುಂಡಿ ತಾಯಿಯನ್ನು ನೆನೆದು ಕೆಲಸ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ.
ಅದೃಷ್ಟ ಸಂಖ್ಯೆ : 5 , ಅದೃಷ್ಟ ಬಣ್ಣ: ಬಿಳಿ
ಧನು ರಾಶಿ : ಇಂದು ನಿಮ್ಮ ಯಾವುದೇ ಭರವಸೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು. ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ಇಂದು ಸಮಯದ ಸೌಂದರ್ಯವನ್ನು ನೋಡುತ್ತಾ, ನೀವು ನಿಮಗಾಗಿ ಸಮಯವನ್ನು ತೆಗೆಯಬಹುದು. ಆದರೆ ಕಚೇರಿಯ ಯಾವುದೇ ಕೆಲಸ ಇದ್ದಕ್ಕಿದ್ದಂತೆ ಬರುವುದರಿಂದ ನೀವು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ
ಅದೃಷ್ಟ ಸಂಖ್ಯೆ : 9, ಅದೃಷ್ಟ ಬಣ್ಣ : ಕೆಂಪು
ಮಕರ ರಾಶಿ : ಕೆಲವು ಒಳ್ಳೆಯ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ಆಗುತ್ತವೆ ಜೀವನಪೂರ್ತಿ ನೀವು ಆ ಘಟನೆಯನ ಮರೆಯಲು ಸಾಧ್ಯ ಆಗೋದಿಲ್ಲ ಸ್ನೇಹಿತ್ರಿಯೊಂದಿಗೆ ಉತ್ತಮ ಬಾಂಧವ್ಯ ಉಂಟಾಗಲಿದೆ ಸಣ್ಣಪುಟ್ಟ ವಿವಾದಗಳೆಲ್ಲ ದೂರ ಆಗಿ ಹೊಸ ಭರವಸೆಗಳು ಆಸೆ ನಿಮ್ಮಲ್ಲಿ ಉಂಟಾಗುತ್ತದೆ ಹೆಚ್ಚು ತಿರುಗಾಟವನ್ನು ಮಾಡದಿರಿ ಕೆಲಸದ ಮೇಲೆ ಶ್ರದ್ಧೆ ನಿಷ್ಠೆ ಇಟ್ಟು ಮಾಡಿದರೆ ಎಲ್ಲಾ ನೆರವೇರುತ್ತದೆ ನಿಮ್ಮ ಇಷ್ಟ ದೇವರು ಪಾರ್ವತಿ ದೇವಿ ಆಗಿದ್ದಾರೆ.
ಅದೃಷ್ಟ ಸಂಖ್ಯೆ : 2, ಅದೃಷ್ಣ ಬಣ್ಣ: ನೀಲಿ
ಕುಂಭ ರಾಶಿ : ಹೆಚ್ಚು ಗಮನವನ್ನು ನಿಮ್ಮ ಕೆಲಸದ ಮೇಲೆ ಇಡೀ ನಕಾರಾತ್ಮಕ ಯೋಚನೆಗಳು ಹೆಚ್ಚಾಗಿ ಬರುತ್ತವೆ ಹಾಗಾಗಿ ಪ್ರತಿದಿನ ಧ್ಯಾನ ಮಾಡಿ ನಿಮ್ಮ ಇಷ್ಟ ದೇವರನ್ನ ನೆನೆದು ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಎಲ್ಲ ಬದಲಾಗಲಿದೆ ಸಾಮಾಜಿಕ ಕಾರ್ಯಗಳು ನಿಮಗೆ ಮಾಡಲು ತುಂಬಾ ಇಷ್ಟ ಆದರೆ ಇಂತಹ ತೀರ್ಮಾನ ಕಷ್ಟದ ಸಮಯದಲ್ಲಿ ಮಾಡುವುದು ಸರಿಯಲ್ಲ ಹಾಗಾಗಿ ಈಗ ನೀವು ಪ್ರಾರಂಭಿಸಿರುವ ಕೆಲಸವನ್ನೇ ಪೂರ್ಣಗೊಳಿಸಲು ಪ್ರಯತ್ನಿಸಿ.
ಅದೃಷ್ಟ ಸಂಖ್ಯೆ : 7, ಅದೃಷ್ಟ ಬಣ್ಣ: ಹಳದಿ
ಮೀನ ರಾಶಿ : ಕೆಲಸದಲ್ಲಿ ನಿಷ್ಠೆ ಶ್ರಮ ವಹಿಸುವುದು ತುಂಬಾ ಅಗತ್ಯ, ಹೊಸ ಜನರು ನಿಮ್ಮಗೆ ಪರಿಚಯ ಆಗಲಿದ್ದಾರೆ ಹೊಸ ವಿಷಯಗಳನ್ನ ನೀವು ತಿಳಿದುಕೊಳ್ಳಲಿದ್ದೀರಿ ಓದುತ್ತಿರುವ ವಿದ್ಯಾರ್ಥಿಗಳು ಗಮನವಿಟ್ಟು ತಮ್ಮ ವಿದ್ಯಾಭ್ಯಾಸ ಮಾಡುವುದು ತುಂಬಾ ಅಗತ್ಯ ಏಕೆಂದರೆ ಈಗ ಅತಿ ಹೆಚ್ಚು ಹಬ್ಬಗಳು ಬರುತ್ತವೆ ಹಾಗಾಗಿ ನಿಮ್ಮ ಗಮನ ಓದಿನ ಕಡೆ ಇರೋದಿಲ್ಲ ಹೆಚ್ಚಾಗಿ ಓಡಾಟ ಮಾಡಲು ನೀವು ಇಚ್ಛೆ ಮಾಡುತ್ತೀರಿ ಹಾಗಾಗಿ ಕೇವಲ ನಿಮ್ಮ ಕೆಲಸದ ಮೇಲೆ ಅತಿ ಹೆಚ್ಚು ಗಮನ ಇಟ್ಟು ಪರಿಶ್ರಮ ಕೊಟ್ಟರೆ ನಿಮಗೆ ಎಲ್ಲಾ ಒಳ್ಳೆಯದಾಗಲಿದೆ
ಅದೃಷ್ಟ ಸಂಖ್ಯೆ :5, ಅದೃಷ್ಟ ಬಣ್ಣ: ಕೆಂಪು.