ಸುದ್ದಿಬಿಂದು ಬ್ಯೂರೋ
ಉಡುಪಿ : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಕೋಟಾದ ವ್ಯಕ್ತಿ ಒಬ್ಬರಿಗೆ ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ 5ಲಕ್ಷ ಪಡೆದು ವಂಚಿಸಿದ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

ಬ್ರಹ್ಮಾವರ ತಾಲೂಕಿನ ಕೊಡಿ ನಿವಾಸಿ ಸುದಿನ ಎಂಬುವವರೆ ಚೈತ್ರಾ ಕುಂದಾಪುರ ವಿರುದ್ಧ ಕೋಟಾ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸುದಿನ ಈ‌ ಮೊದಲು ಚೈತ್ರಾ ಜೊತೆಯಲ್ಲಿ ಓಡಾಡತ್ತಾ ಇದ್ದರು, ಸುದಿನ ಗೆ ಚೈತ್ರಾ ನಿನಗೊಂದು ಬಟ್ಟೆ ಅಂಗಡಿ ಹಾಕೊಡತ್ತೀನಿ ಐದು ಲಕ್ಷ ಕೊಡು ಅಂತಾ ಹೇಳಿದ್ದಳಂತೆ. ಅದಕ್ಕೆ ಈ ಯುವಕ ಮೀನು ವ್ಯಾಪರ ಸೇರಿ ಬೇರೆ ಬೇರೆ ಉದ್ಯೋಗ ಮಾಡಿ ಕಷ್ಟ ಪಟ್ಟು ಇಟ್ಟಕೊಂಡಿದ್ದ. ಆ ಎಲ್ಲಾ ಹಣವನ್ನ ಚೈತ್ರಾಳಿಗೆ ಕೊಟ್ಟು ಕೈ ಸುಟ್ಟುಕೊಂಡಿದ್ದಾನೆ,

ಕಂತುಗಳ ಮೇಲೆ ಹಂತ ಹಂತವಾಗಿ ಹಣ ಕೊಟ್ಟಿದ್ದ ಸುದಿನ, ಚೈತ್ರಾಳಿಗೆ ಹಣ ಕೊಟ್ಟಿದ್ದನಂತೆ. ಆ ಯುವಕ ಕೊಟ್ಟ ಐದು ಲಕ್ಷ ಹಣವನ್ನ ತಿಂದು ತೇಗಿದ ಚೈತ್ರಾ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ನೀ ಏನಾದ್ರೂ ದೂರು ಕೊಟ್ಟರೆ ನಿನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಇದೆ ಕೋಟಿ ಡೀಲ್ ಲೇಡಿ ಚೈತ್ರ ಸುದಿನ ಗೆ ಬೆದರಿಕೆ ಹಾಕಿದ್ದಳಂತೆ. ಈ ವಿಚಾರವನ್ನ ಸುದಿನ ಮನೆಯವರಿಗೆ ತಿಳಿದ್ದು, ಅವರು ಸಹ ಆಕೆಯ ಬೆದರಿಕೆ ಹೆದರಿ ಹೋಗಿ ಬಿಡು ಆಕೆ ಮಾಡಿದ ಪಾಪ ಅನುಭವಿಸ್ತಾಳೆ ಎಂದು ಹೇಳಿ ಆ ಹಣವನ್ನ ಬಿಟ್ಟು ಹಾಕಿದ್ದರು.

ಇದೀಗ ಕೋಟಾ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ದೂರು ಕೊಟ್ಟಿರುವ ಯುವಕ ಚೈತ್ರಾ‌ಳಿಂದ ವಂಚನೆಗೆ ಒಳಗಾದವರು ಬಂದು ದೂರು ಕೊಡಿ ಅಂತಿದ್ದಾರೆ.