ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯಾಗಿರುವ ಅಭಿನವ ಹಾಲಶ್ರೀ ಯನ್ನ ಸಿಸಿಬಿ ಪೊಲೀಸರು ಒಡಿಸಾದಲ್ಲಿ ಕಳೆದ ರಾತ್ರಿ ಬಂಧಿಸಿದ್ದಾರೆ.
ಗೋವಿಂದ ಪೂಜಾರಿ ಎಂಬುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಾಡಿಗೆ ಭಾಷಣಗಾರ್ತಿ ಚೈತ್ರಾ ಕುಂದಾಪುರ ಗ್ಯಾಂಗ್ ಪೂಜಾರಿಯವರಿಂದ ಐದು ಕೋಟಿ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಈಗಾಗಲೆ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನ ಬಂಧಿಸಿ ವಿಚಾರಣೆ ನಡೆಸಿದ್ದು ಈ ವೇಳೆ ಪ್ರಕರಣಲ್ಲಿ ಅಭಿನವ ಹಾಲಶ್ರೀಗಳ ಹೆಸರು ಪ್ರಸ್ತಾಪಿಸಿದ್ದರು.
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಅಭಿನವ ಹಾಲಶ್ರಿ ತಲೆಮರೆಸಿಕೊಂಡಿದ್ದರು, ಇದೀಗ ಸಿಸಿಬಿ ಪೊಲೀಸರು ಒಡಿಸಾದಲ್ಲಿ ಹಾಲಶ್ರೀಯನ್ನ ಬಂಧನ ಮಾಡಿದ್ದು, ಇಂದು ಸಂಜೆ 3ಗಂಟೆಗೆ ಹೊತ್ತಿಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆ ಇದೆ.ಈ ಪ್ರಕರಣದಲ್ಲಿ ಹಾಲಶ್ರೀ ಒಂದುವರೆ ಕೋಟಿ ಪಡೆದುಕೊಂಡಿದ್ದರು ಎಂದು ಚೈತ್ರಾ ಕುಂದಾಪುರ ಹೇಳಿದ್ದರು.
ಚೈತ್ರಾ ಬಂಧನವಾದಾಗ ಹಾಲಶ್ರೀ ಸ್ವಾಮಿ ಅವರ ಬಂಧನವಾಗಲಿ ದೊಡ್ಡ ದೊಡ್ಡವರ ಹೆಸರು ಹೊರಬರಲಿದೆ ಎಂದು ಮಾಧ್ಹಮದವರ ಎದರು ಹೇಳಿದ್ದರು, ಆದರೆ ಇದೀಗ ಹಾಲಶ್ರೀ ಬಂಧನವಾಗಿದ್ದು, ಕೋಟಿ ಕೋಟಿ ಡೀಲ್ ನಲ್ಲಿ ಇನ್ನೆಷ್ಟು ಮಂದಿ ಇದ್ದಾರೆ ಎನ್ನುವುದು ಹೊರಬರಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.